ಆಕ್ರಮ ಮರಳುಗಾರಿಕೆ: ಹಿಟಾಚಿ ಸಹಿತ ಮರಳು ವಶ
Thursday, September 11, 2025
ಶಿರ್ವ: ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾಪನಾಶಿನಿ ನದಿಯ ಸರಕಾರಿ ಜಾಗದಲ್ಲಿ ಆಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿರುವ ಪೋಲೀಸರು ಒಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಿರ್ವ ಪೊಲೀಸ್ ಠಾಣೆ ಅಧಿಕಾರಿ ಮಂಜುನಾಥ ಮರಬದ ನೇತೃತ್ವದ ಪೋಲಿಸ್ ನೇತೃತ್ವದ ತಂಡ ಮಂಗಳವಾರ ಸಂಜೆ ಮುಲ್ಕಿಯ ಪ್ರಜ್ವಲ್ ಎಂಬಾತನು ಗರಡಿ ಮನೆ ಹತ್ತಿರ ಪಾಪನಾಶಿನಿ ಹೊಳೆಯ ಸರ್ಕಾರಿ ಜಾಗದಲ್ಲಿ ಹಿಟಾಚಿ ಸಹಾಯದಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು ೨ ಟಿಪ್ಪರ್ ನಷ್ಟು ಮರಳನ್ನು ಯಾವುದೇ ಪರವಾನಿಗೆ ಪಡೆಯದೇ ಕಳ್ಳತನ ಮಾಡಿ ಮಾರಾಟ ಮಾಡಲು ಹಿಟಾಚಿ ಮೂಲಕ ಶೇಖರಣೆ ಮಾಡಿರುವುದುದು ಪತ್ತೆಯಾಗಿದೆ. ಸ್ಥಳದಲ್ಲಿ ಎರಡು ಟಿಪ್ಪರ್ ಹಾಗೂ ಹಿಟಾಚಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.