ನಾಳೆ ಜೀವದಯಾಷ್ಟಮಿ

ನಾಳೆ ಜೀವದಯಾಷ್ಟಮಿ

ಉಜಿರೆ: ‘ಬದುಕು ಮತ್ತು ಬದುಕಲು ಬಿಡು’ ಎಂಬ ತತ್ವದೊಂದಿಗೆ ಅಹಿಂಸೆಯೇ ಜೈನಧರ್ಮದ ಸಾರವಾಗಿದ್ದು, ಮಂಗಳವಾರ ‘ಜೀವದಯಾಷ್ಟಮಿ’ ಪ್ರಯುಕ್ತ ಎಲ್ಲಾ ಶ್ರಾವಕರು, ಶ್ರಾವಕಿಯರು ಜಪ, ತಪ, ಧ್ಯಾನ, ಪ್ರಾರ್ಥನೆ, ಸ್ವಾಧ್ಯಾಯ ಉಪವಾಸ ಮೊದಲಾದ ವ್ರತನಿಯಮಗಳ ಪಾಲನೆಯೊಂದಿಗೆ ಆಧ್ಯಾತ್ಮಿಕ ಚಿಂತನ-ಮಂಥನದಲ್ಲಿ ಇಡೀ ದಿನ ನಿರತರಾಗುತ್ತಾರೆ.

ಜೈನಖಾಶಿ ಮೂಡಬಿದ್ರೆಯಲ್ಲಿ ಎಲ್ಲಾ 18 ಬಸದಿಗಳು ದಿನವಿಡಿ ತೆರೆದಿದ್ದು, ದೇವರದರ್ಶನ, ಪ್ರಾರ್ಥನೆಗೆ ಮುಕ್ತ ಅವಕಾಶವಿದೆ. ‘ಗುರುಬಸದಿ’ಯಲ್ಲಿ ಧವಳತ್ರಯ ಗ್ರಂಥಗಳು ಹಾಗೂ ಅಮೂಲ್ಯ ಜಿನಬಿಂಬಗಳ ದರ್ಶನಕ್ಕೆ ಅವಕಾಶವಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article