ಶ್ರಮದಾನದ ಮೂಲಕ ಸ್ವಚ್ಚತೆ
Sunday, October 26, 2025
ಬಂಟ್ವಾಳ: ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಇರ್ವತ್ತೂರಿನಿಂದ ಎರ್ಮೆನಾಡಿಗೆ ತೆರಲಕುವ ರಸ್ತೆಯ ಬದಿಯಲ್ಲಿದ್ದ ಪೊದೆಗಳನ್ನು ಶ್ರಮದಾನ ಮೂಲಕ ಯೆರವುಗೊಳಿಸಿ ಸ್ವಚ್ಛತೆ ಮಾಡಲಾಯಿತು.
ಸಾಮಾಜಿಕ ಕಾರ್ಯಕರ್ತ ಲೋಕೇಶ್ ನಾಯ್ಕ್ ನೇತೃತ್ವದಲ್ಲಿ ಸ್ವಚ್ಛತೆಯ ಕಾರ್ಯ ನಡೆಸಲಾಯಿತು.
ಸ್ಥಳೀಯರಾದ ಕೊರಗ ನಾಯ್ಕ್, ವಿಠಲ ಪೂಜಾರಿ, ವಸಂತ ಶೆಟ್ಟಿ, ಅಶ್ವತ್ ಪೂಜಾರಿ, ವಿಜಯ್ ನಾಯ್ಕ್, ಗುರು ಪ್ರಸಾದ್ ಶೆಟ್ಟಿ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ದಯಾನಂದ, ಸುಧೀಂದ್ರ ಶೆಟ್ಟಿ ಉಪಸ್ಥಿತರಿದ್ದರು.