‘ವಿಶ್ವ ಹೆಣ್ಣುಮಕ್ಕಳ ದಿನಾಚರಣೆ’
ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಕಳ ಹಿರಿಯ ಸಿವಿಲ್ ಮತ್ತು ಎ ಸಿ ಜೆ ಎಂ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಸಮಿತಿ ಕಾರ್ಕಳದ ಅಧ್ಯಕ್ಷೆ ಶರ್ಮಿಳಾ ಸಿ.ಎಸ್. ರವರು ‘ಯತ್ರ ನಾರ್ಯಾಸ್ತು ಪೂಜ್ಯoತೇ ರಮoತೇ ತತ್ರ ದೇವತಾ‘ ಎಂಬ ಮಾತಿನಂತೆ ಎಲ್ಲಿ ಸ್ತ್ರೀ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳುತ್ತಾ ನ್ಯಾಯಾಲಯಗಳಲ್ಲಿ ಸ್ತ್ರೀಯರಿಗೆ ಉಚಿತವಾಗಿ ಕಾನೂನಿನ ನೆರವನ್ನು ನೀಡಲಾಗುವುದು ಎಂದರು.
ಪ್ರಾಸ್ತಾವಿಕ ನುಡಿಗಳನ್ನು ಆಡಿದ ರೋಟರಿ ಮಾರ್ಗದರ್ಶಕರಾದ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ರವರು ರೋಟರಿಯ ಅನೇಕ ಸಾಮಾಜಿಕ ಸೇವೆಗಳನ್ನು ವಿವರಿಸಿದರು.
ತಾಲೂಕು ವೈಧ್ಯಾಧಿಕಾರಿ ಡಾ ಸಂದೀಪ್ ಕುಡ್ವಾ ರವರು ಕಾರ್ಕಳದಲ್ಲಿ ಶೇಕಡಾವಾರು ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳು ಅಧಿಕ ಸಂಖ್ಯೆಯಲ್ಲಿದ್ದು ಭವಿಷ್ಯದ ಒಳ್ಳೆಯ ಬೆಳವಣಿಗೆಯನ್ನು ತಿಳಿಸಿದರು, ಸಂಪನ್ಮೂಲವ್ಯಕ್ತಿ ಕಾರ್ಕಳದ ನ್ಯಾಯವಾದಿ ಶ್ರೀಮತಿ ಮುಕ್ತಾ ವಿ. ರವರು ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಾ ಅನಾದಿ ಕಾಲದಿಂದಲೂ ಹೆಣ್ಣಿಗೆ ಗಂಡಿನಷ್ಟೇ ಸಮಾನತೆ ಇತ್ತು ಎಂಬುದಾಗಿ ಪುರಾಣ ಕಥೆಗಳನ್ನು ಉಲ್ಲೆಖಿಸಿದರು.
ಕಾರ್ಕಳ ವಕೀಲರ ಸಂಘದ ಉಪಾಧ್ಯಕ್ಷ ಹರೀಶ್ ಅಧಿಕಾರಿಯವರು ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರಕಿಟ್ ಗಳನ್ನುಕೊಡುತ್ತಿರುವ ರೋಟರಿಯ ಕೆಲಸವನ್ನು ಹೊಗಳಿದರು, ಒಂದೆರಡು ಮಕ್ಕಳನ್ನು ನೋಡಿ ಕೊಳ್ಳಲು ಕಷ್ಟ ಪಡುತ್ತಿರುವ ಈ ಕಾಲಘಟ್ಟದಲ್ಲಿ 10-20 ಮಕ್ಕಳನ್ನು ಒಂದೇ ಕೋಣೆಯೊಳಗೆ ಇಡೀ ದಿನ ನೋಡಿಕೊಳ್ಳುತ್ತಿರುವ ಅಂಗನವಾಡಿಯ ಕಾರ್ಯ ಮಹತ್ತರವಾಗಿದೆ ಎಂದು ಆಹಾರ ಕಿಟ್ ಗಳನ್ನು ವಿತರಿಸಿದ ರೋಟರಿ ಜಿಲ್ಲಾ ಚೇರ್ಮನ್ ಹರಿಪ್ರಕಾಶ್ ಶೆಟ್ಟಿಯವರು ನುಡಿದರು.
ರೋಟರಿ ಅಧ್ಯಕ್ಷ ಸುರೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು, ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ ಎಲ್ಲರಿಗೂ ಧನ್ಯವಾದಗಳನ್ನಿತ್ತರು, ಮೇಲ್ವಿಚಾರಕರಕಿ ವಸಂತಿ ಪ್ರಾರ್ಥಿಸಿದರು, ರೋಟ ಸುಬ್ರಹ್ಮಣ್ಯ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.