ಹೊಸ ಬದುಕು ಆಶ್ರಮ ಸಾಲಿಗ್ರಾಮದಲ್ಲಿ ನಾಳೆ ದೀಪಾವಳಿ ಆಚರಣೆ
Saturday, October 18, 2025
ಕುಂದಾಪುರ: ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಹಾಗೂ ಹಸ್ತ ಚಿತ್ತ ಫೌಂಡೇಶನ್ ಸಹಯೋಗದಲ್ಲಿ ದೀಪಾವಳಿ ಹಬ್ಬದ ಆಚರಣೆ ಪ್ರಯುಕ್ತ ಸೇವೆ, ಸಡಗರ ಹಾಗೂ ಸಮ್ಮಾನ ಕಾರ್ಯಕ್ರಮ ಸಾಲಿಗ್ರಾಮದ ಹೊಸ ಬದುಕು ಆಶ್ರಮದಲ್ಲಿ ಅ.19 ರಂದು ಸಂಜೆ 5.30ಕ್ಕೆ ನಡೆಯಲಿದೆ.
ಇದೇ ವೇಳೆ ಆಶ್ರಮಕ್ಕೆ ಅಗತ್ಯವಾದ ದಿನಸಿ ಸಾಮಗ್ರಿ, ಬಟ್ಟೆ ದಿಂಬು, ಬೆಡ್ ಶೀಟ್ ಹಸ್ತಾಂತರ, ಆಶ್ರಮ ವಾಸಿಗಳೊಂದಿಗೆ ದೀಪಾವಳಿ ಆಚರಣೆ, ಸಂಗೀತ ಸಂಜೆ ಕಾರ್ಯಕ್ರಮವೂ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.