ತೆಂಕಮಿಜಾರು ಗ್ರಾಮ ಸಮಿತಿಯ ಕಿಸಾನ್ ಜಾಗೃತಿ ಗ್ರಾಮ ಸಮಾವೇಶ ಕಾರ್ಯಕ್ರಮ
ನಂತರ ನಡೆದ ಕಾಯ೯ಕ್ರಮಗಳಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಬಗ್ಗೆ ಸೆಲ್ಕೋ ಸೋಲಾರ್ ಕಂಪೆನಿಯ ಹಿರಿಯ ಪ್ರಬಂಧಕ ರವೀನಾ ಬಂಗೇರ ಮಾಹಿತಿ ನೀಡಿದರು.
ಗೌರವ:
ಗ್ರಾಮದ ಹಿರಿಯ ಹಾಗೂ ಪ್ರಗತಿಪರ ರಾಜ್ಯ ಪ್ರಶಸ್ತಿ ವಿಜೇತ ಶಂಕರ್ ಶೆಟ್ಟಿ ಮಿಜಾರ್ ಗುತ್ತು, ಸದಾಶಿವ ಶೆಟ್ಟಿ ಉತ್ತಲಾಡಿ, ತರಕಾರಿ ಬೆಳೆಯಲ್ಲಿ ಹೆಸರು ಮಾಡಿರುವ ಮಾಧವ ಗೌಡರನ್ನು ಫಲ ಪುಷ್ಪ ನೀಡಿ ಗೌರವಿಸಲಾಯಿತು.
ತೆಂಕಮಿಜಾರು ಗ್ರಾ.ಪಂಚಾಯತ್ ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ವಿಘ್ನೇಶ್ ಭಟ್ ಮತ್ತು ಕಿಸಾನ್ ಕರೆ ಸಮಿತಿಯ ಪ್ರಮುಖರು ಹಾಗೂ ಹಿರಿಯ ಕೃಷಿಕರಾದ ಜಯರಾಮ್ ಭಟ್, ಇರುವೈಲು ಕಿಸಾನ್ ಗ್ರಾಮ ಸಮಿತಿಯ ಅಧ್ಯಕ್ಷ ರಾಜೇಶ್ ಕಾಳೂರು,ವಸಂತ್ ಭಟ್, ಕಲ್ಲಮುಂಡ್ಕೂರು ಗ್ರಾಮದ ಕಿಸಾನ್ ಗೌರವಾಧ್ಯಕ್ಷ ಜಾನ್ ರೆಬೆಲ್ಲೋ, ಹೈ ಟೆನ್ಶನ್ ವಿದ್ಯುತ್ ಟವರ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರಾದ ಎಡಪದವು ಕೆ .ಬಿ .ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೂರ್ಯ ಘರ್ ಯೋಜನೆಗೆ ಗ್ರಾಮದ 30 ಕ್ಕೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಾಯಿಸಲಾಯಿತು.
ಯುಕೆಟಿಸಿಎಲ್ ವಿದ್ಯುತ್ ಕಂಪನಿಯು ಗ್ರಾಮದ ಭಾಸ್ಕರ್ ಶೆಟ್ಟಿ ಮತ್ತು ಬಡಗನಿಜಾರು ಗ್ರಾಮದ ಸಂಜೀವ ಗೌಡರ ಅಡಿಕೆ ತೋಟವನ್ನು ನಾಶಪಡಿಸಿರುವುದನ್ನ ಸಭೆಯಲ್ಲಿ ಸರ್ವಾನು ಮತದಿಂದ ಖಂಡಿಸಲಾಯಿತು. ಈ ಬಗ್ಗೆ ಗ್ರಾಮದ ರೈತರು ಜೊತೆಗೂಡಿ, ಕಂಪನಿ ನಾಶ ಮಾಡಿರುವ ಕೃಷಿಗೆ ಮೌಲ್ಯ ಆಧರಿತ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಮತ್ತು ಅಷ್ಟೇ ಪ್ರಮಾಣದ ಭೂಮಿಯನ್ನ ಸರಕಾರ ಮಂಜೂರು ಗೊಳಿಸಬೇಕೆಂದು ಒತ್ತಾಯಿಸಿ ಹೋರಾಟವನ್ನು ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.



