ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಡೋರ್ ತೆಗೆಯದೇ ಸತಾಯಿಸಿದ ಚಾಲಕ-ಆರೋಪ
Monday, October 27, 2025
ಸುಳ್ಯ: ಪ್ರಯಾಣಿಕರು ಇಳಿಯಬೇಕಾದ ಜಾಗದಲ್ಲಿ ಬಸ್ಸನ್ನು ನಿಲ್ಲಿಸದೆ ಇನ್ನೆಲ್ಲೋ ನಿಲ್ಲಿಸಿ ಬಳಿಕ ಸ್ವಯಂ ಚಾಲಿತ ಬಾಗಿಲನ್ನು ತೆರೆಯದೆ ಸತಾಯಿಸುವ ಕೆಎಸ್‌ಆರ್‌ಟಿಸಿ ಬಸ್‌ನ ಚಾಲನೊಬ್ಬನನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶಿಕ್ಷೆಯ ರೂಪದಲ್ಲಿ ಆ ಬಸ್‌ನಿಂದ ಇಳಿಸಿ ಇನ್ನೊಂದು ಬಸ್‌ಗೆ ನಿಯೋಜಿಸಿದ್ದಾರೆ.
ಸ್ವಯಂ ಚಾಲಿತ ಬಾಗಿಲನ್ನು ಹೊಂದಿರುವ ಸುಳ್ಯ-ಕೊಯನಾಡು ನಡುವಣ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಗಫೂರ್ ಅವರ ಮೇಲೆ ಆರೋಪ ಕೇಳಿಬಂದಿದೆ.
ಅ.26ರಂದು ಕೊಯನಾಡಿನಿಂದ ಸುಳ್ಯಕ್ಕೆ ಬಸ್ ಬರುತ್ತಿದ್ದಾಗ ಚಾಲಕ ತನ್ನ ಚಾಳಿಯನ್ನು ಪುನರಾವರ್ತಿಸಿದ್ದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಯಿತು.
ತತ್‌ಕ್ಷಣ ನಿಗಮದ ಪುತ್ತೂರು ಹಾಗೂ ಸುಳ್ಯದ ಅಧಿಕಾರಿಗಳಿಗೆ ದೂರು ನೀಡಿದರು. ತ್ವರಿತವಾಗಿ ಸ್ಪಂದಿಸಿರುವ ಇಲಾಖಾಧಿಕಾರಿಗಳು ಚಾಲಕನನ್ನು ಆ ಬಸ್‌ನಿಂದ ಇಳಿಸಿ ಬೇರೆ ಮಾರ್ಗದ ಬಸ್‌ಗೆ ನಿಯೋಜನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.