ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್‌ಡಿಎಂ ಮೆಡಿಕಲ್ ಯೂನಿರ್ವಸಿಟಿ ಉಪ-ಉಪಕುಲಪತಿ ಭೇಟಿ
Monday, October 27, 2025
ಉಜಿರೆ: ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್‌ಡಿಎಂ ಮೆಡಿಕಲ್ ಯೂನಿರ್ವಸಿಟಿಯ ಉಪ-ಉಪಕುಲಪತಿ ಹಾಗೂ ಧಾರವಾಡ ಎಸ್‌ಡಿಎಂ ಎಜ್ಯೂಕೇಶನ್ ಸೊಸೈಟಿಯ ಕಾರ್ಯದರ್ಶಿ ಆಗಿರುವ ಜೀವಂಧರ್ ಕುಮಾರ್ ಇವರು ಅ.24 ರಂದು ಭೇಟಿ ನೀಡಿದರು.
ಬಳಿಕ ಅವರು ಮಾತನಾಡಿ, ಲೀಡರ್ ಇದ್ದ ಹಾಗೆ ಫಾಲೋವರ‍್ಸ್ ಇರುತ್ತಾರೆ. ಹೆಗ್ಗಡೆಯಂತಹ ಮಹಾನ್ ವ್ಯಕ್ತಿಯ ಲೀಡರ್‌ಶಿಪ್ ನಮಗಿರುವಾಗ ನಾವೇ ಅತ್ಯಂತ ಧನ್ಯರು ಎಂದರು.
ಇಲ್ಲಿನ ವೈದ್ಯರಲ್ಲಿ ಸಿಬ್ಬಂದಿಗಳಲ್ಲಿ ವಿಶೇಷವಾಗಿ ನಾನು ನಗುಮೊಗವನ್ನು ಕಾಣುತ್ತಿದ್ದೇನೆ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಬೆಳೆಯುತ್ತಿದೆ. ಹೆಗ್ಗಡೆಯವರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುತ್ತಿರುವ ನಿಮ್ಮೆಲ್ಲರಿಂದ ಈ ಆಸ್ಪತ್ರೆ ಮತ್ತಷ್ಟು ಬೆಳಯಲಿದೆ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಪೇಥಲಾಜಿಸ್ಟ್ ಡಾ. ಮೇಘಾ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.