ವಿರೋಧದ ನಡುವೆಯೂ ಇಂದಿನಿಂದ ಟೋಲ್ ವಸೂಲಿ

ವಿರೋಧದ ನಡುವೆಯೂ ಇಂದಿನಿಂದ ಟೋಲ್ ವಸೂಲಿ

ಮಂಗಳೂರು: ನಾಗರಿಕರ ಪ್ರತಿಭಟನೆ, ಹೋರಾಟ ಹಾಗೂ ಕಾನೂನು ಹೋರಾಟಗಳ ನಡುವೆಯೇ ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಶುಲ್ಕ ವಸೂಲಿ ಆರಂಭಗೊಳ್ಳಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಘೋಷಣೆ ಮಾಡಿದ್ದು, ಜಾಹೀರಾತು ನೀಡಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಕಟಿಸಿದ ಅಧಿಸೂಚನೆಯಂತೆ ನ.12ರಂದು ಬೆಳಗ್ಗೆ 8ರಿಂದ ಟೋಲ್ ಶುಲ್ಕ ವಸೂಲಿ ಮಾಡಲು ಪ್ರಾರಂಭಿಸಿದ್ದಾರೆ.

ಇದರಂತೆ ಕಾರು, ಜೀಪು, ವ್ಯಾನ್ ಸಹಿತ ಲಘುವಾಹನಗಳ ಏಕ ಮುಖಿ ಸಂಚಾರಕ್ಕೆ ನಾಳೆಯಿಂದ 85ರೂ. ಶುಲ್ಕ ಪಾವತಿಸಬೇಕು. ಮಿನಿ ಬಸ್ ಸಹಿತ ಇತರ ವಾಹನಗಳಿಗೆ ಸಂಚಾರಕ್ಕೆ 140ರೂ., ಬಸ್, ಟ್ರಕ್ ಸಹಿತ ಘನ ವಾಹನಕ್ಕೆ 290 ರೂ. ಮತ್ತು ವಾಣಿಜ್ಯ ವಾಹನಗಳಿಗೆ 320ರೂ. ಶುಲ್ಕ ಸೇರಿದಂತೆ ವಿವಿಧ ಕೆಟಗರಿ ನೀಡಲಾಗಿದೆ.

ಟೋಲ್ ಪ್ಲಾಜಾ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರ ವಾಣಿಜ್ಯೇತರ ವಾಹನಗಳಿಗೆ ಪ್ರತಿ ತಿಂಗಳು 340 ರೂ. ಶುಲ್ಕ ನಿಗದಿಗೊಳಿಸಿದೆ. 

ಟೋಲ್ ಪ್ಲಾಝ ವಿರೋಧಿಸಿ ನಾಗರಿಕ ಕ್ರಿಯಾ ಸಮಿತಿ ನೀಡಿದ ಹೈಕೋರ್ಟು ದೂರಿನ ತೀರ್ಪು ನ.12ರಂದು ಪ್ರಕಟವಾಗಲಿದೆ. ಇದೇ ವೇಳೆ ಹೆದ್ದಾರಿ ಇಲಾಖೆ ಶುಲ್ಕ ಸಂಗ್ರಹಕ್ಕೆ ಮುಂದಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article