ಎಕ್ಸಲೆಂಟ್ ಯುವರಾಜ್ ಜೈನ್ ಅವರಿಗೆ ಶ್ರೀ ಕೇಶವಾನಂದ ಭಾರತಿ ಶೈಕ್ಷಣಿಕ ಪ್ರಶಸ್ತಿ

ಎಕ್ಸಲೆಂಟ್ ಯುವರಾಜ್ ಜೈನ್ ಅವರಿಗೆ ಶ್ರೀ ಕೇಶವಾನಂದ ಭಾರತಿ ಶೈಕ್ಷಣಿಕ ಪ್ರಶಸ್ತಿ


ಮೂಡುಬಿದಿರೆ: ಡಾ. ಕಿಲಾರು ಗೋಪಾಲಕೃಷ್ಣ ಪ್ರತಿಷ್ಠಾನ (ರಿ) ಸಂಪಾಜಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿಯಲ್ಲಿ ಕೊಡ ಮಾಡುವ ಶ್ರೀ ಕೇಶವಾನಂದ ಭಾರತಿ ಶೈಕ್ಷಣಿಕ ಪ್ರಶಸ್ತಿ ಯನ್ನು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ  ಯುವರಾಜ ಜೈನ್  ಅವರಿಗೆ ಸಂಪಾಜಿ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಯಕ್ಷಗಾನ ವಿದ್ವಾಂಸರಾದ ಡಾ ಪ್ರಭಾಕರ ಜೋಶಿ ಅಭಿನಂದನಾ ಮಾತುಗಳನ್ನಾಡಿ ನಾರಾವಿ ಯಂತಹ ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಉಜಿರೆ ಧರ್ಮಸ್ಥಳದಲ್ಲಿ ಸಂಸ್ಕಾರ ಭರಿತರಾಗಿ ಎಕ್ಸಲೆಂಟ್ ಎಂಬ ವಿದ್ಯಾಸಂಸ್ಥೆಯನ್ನು ಕಟ್ಟಿ ಭಾಷೆ, ಕಲೆ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರಗಳ ಸಮರಸ ಸಂಗಮವಾಗಿ ಆ ವಿದ್ಯಾಸಂಸ್ಥೆಯನ್ನು ಬೆಳೆಸಿದ ಯುವರಾಜ ಜೈ ನ್ ಆದರ್ಶ ಶಿಕ್ಷಣ ವ್ಯವಸ್ಥೆಗೆ ಎಕ್ಸಲೆಂಟ್ ಸಂಸ್ಥೆಯನ್ನು ಮಾದರಿಯಾಗಿಸಿದವರು ಎಂದರು. 

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಯುವರಾಜ ಜೈನ್ ಶಿಕ್ಷಣದೊಂದಿಗೆ ಬದ್ಧತೆ ಪ್ರಾಮಾಣಿಕತೆ ಸಂಸ್ಕಾರ ಮೇಳವಿಸಿದಾಗ ಮಾತ್ರವೇ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ನಮ್ಮ ಸಂಸ್ಥೆ ಅಂತಹ ಸಮಾಜ ನಿರ್ಮಾಣದ ಕನಸು ಹೊತ್ತಿದೆ ಅದಕ್ಕಾಗಿ ವಿದ್ಯಾರ್ಥಿಗಳನ್ನು ಸಂಸ್ಕಾರ ಭರಿತರನ್ನಾಗಿಸಿ ಶಿಕ್ಷಣದೊಂದಿಗೆ ಯೋಗ ಧ್ಯಾನ ಭಜನೆ ಹನುಮಾನ್ ಚಾಲೀಸಾ ರಾಷ್ಟ್ರೀಯತೆ ಕ್ರೀಡೆ ಮೊದಲದುದರೊಂದಿಗೆ ಸಮಷ್ಟಿ ಚಿಂತನೆಯೊಂದಿಗೆ ಬೆಳೆಸಲಾಗುತ್ತದೆ. ಈ ಪ್ರಶಸ್ತಿ ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಪೂಜ್ಯ ಕೇಶವಾನಂದ ಭಾರತಿ ಸ್ವಾಮೀಜಿಯವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಪಥಿಕರಾಗೋಣ ಎಂದರು.

ಎಡನೀರು ಮಠ ಕಾಸರಗೋಡಿನ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚನವಿತ್ತರು.

ಮಂಗಳೂರು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಅಡ್ವಕೇಟ್ ಜನರಲ್ ಉದಯ ಹೊಳ್ಳ, ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯವಾದಿಗಳಾದ ಸಿರಿಲ್ ಪ್ರಸಾದ್ , ಆಗಮ ಶಾಸ್ತ್ರಜ್ಞರಾದ ಪಂದ್ಯ ಭಾಸ್ಕರ ಭಟ್, ವೇದಮೂರ್ತಿ ಕುಡುಪು ನರಸಿಂಹ ತಂತ್ರಿ, ಖ್ಯಾತ ಪಿಟೀಲು ವಾದಕರಾದ ವಿಠಲ ರಾಮಮೂರ್ತಿ, ಖ್ಯಾತ ಜಾದೂಗಾರ ಪ್ರೊಫೆಸರ್ ಶಂಕರ್, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಉಜಿರೆ ಅಶೋಕ ಭಟ್ ಉಪಸ್ಥಿತರಿದ್ದರು.

ಹಿರಣ್ಯ ವೆಂಕಟೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article