ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳ ಪ್ರಾಜೆಕ್ಟ್ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಸಂಶೋಧನಾ ಪ್ರಬಂಧವಾಗಿ ಪ್ರಕಟ
ಫ್ಲೆಕ್ಸಿಬಲ್ ಪಿವಿಎ/ ಸಿಲ್ವರ್ ಸಲ್ಫೈಡ್ ನಾನೋ ಹೈಬ್ರಿಡ್ ಫಿಲ್ಮ್ಸ್ ಆಸ್ ಡ್ಯೂಯಲ್ ಫಂಕ್ಷನಲ್ ಮೆಟೀರಿಯಲ್ಸ್ ಫಾರ್ ಯುವಿ ಶೀಲ್ಡಿಂಗ್ ಅಂಡ್ ನಾನ್ ಲೀನಿಯರ್ ಆಪ್ಟಿಕಲ್ ಅಪ್ಲಿಕೇಷನ್ಸ್ ಎಂಬ ಶೀರ್ಷಿಕೆಯ ಈ ಪ್ರಬಂಧವು 4.6 ಇಂಪ್ಯಾಕ್ಟ್ ಫ್ಯಾಕ್ಟರ್ ಮತ್ತು Q1 ರ‍್ಯಾಂಕಿಂಗ್ ಹೊಂದಿರುವ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವುದು ಗಮನಾರ್ಹವಾಗಿದೆ.
ನೇರಳಾತೀತ ಕಿರಣಗಳು ಮತ್ತು ಅತಿ ತೀವ್ರ ಲೇಸರ್ ಕಿರಣಗಳನ್ನು ನಿರ್ಬಂಧಿಸುವಂತಹ ವಸ್ತುಗಳ ಕುರಿತು ಈ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು. ಕಾಲೇಜಿನ ಎಂ.ಎಸ್ಸಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಡಾ. ಶಿಲ್ಪಾ ಎಂ.ಪಿ. ಅವರ ಮಾರ್ಗದರ್ಶನದಲ್ಲಿ, ಡಾ. ಎ.ಪಿ. ರಾಧಾಕೃಷ್ಣ ಅವರ ವಿಜಿಎಸ್ಟಿ ಪ್ರಾಯೋಜಿತ ಘನಸ್ಥಿತಿ ಸಂಶೋಧನಾಲಯದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಂಟನಿ ಪ್ರಕಾಶ್ ಮೊಂತೇರೊ ಹರ್ಷ ವ್ಯಕ್ತಪಡಿಸಿ, ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸಂಶೋಧನಾ ನೈಪುಣ್ಯತೆ ಹಾಗೂ ಶ್ರಮವನ್ನು ಶ್ಲಾಘಿಸಿದ್ದಾರೆ.