ರಸ್ತೆ ವಿಚಾರದಲ್ಲಿ ಸಂಘರ್ಷಕ್ಕೆ ಕಂದಾಯ, ವಿಟ್ಲ ಪೊಲೀಸರೇ ಕಾರಣ: ರಕ್ಷಣೆ ಒದಗಿಸಲು ಆಗ್ರಹ

ರಸ್ತೆ ವಿಚಾರದಲ್ಲಿ ಸಂಘರ್ಷಕ್ಕೆ ಕಂದಾಯ, ವಿಟ್ಲ ಪೊಲೀಸರೇ ಕಾರಣ: ರಕ್ಷಣೆ ಒದಗಿಸಲು ಆಗ್ರಹ


ಬಂಟ್ವಾಳ: ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳ ಹಾಗೂ ಬಂಟ್ವಾಳ ಮತ್ತು ಪುತ್ತೂರು ಕಂದಾಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಪುಣಚಗ್ರಾಮದ ಸುಣ್ಣಂಗಳ ಎಂಬಲ್ಲಿ ಈಚೆಗೆ ರಸ್ತೆ ವಿಚಾರದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಆರೋಪಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್, ರಸ್ತೆ ವಂಚಿತ ರಾಮಣ್ಣ ನಾಯ್ಕ್ ಮತ್ತವರ ಸಹಚರರಿಂದ ತನಗೆ ಹಾಗೂ ಇಲ್ಲಿನ ನಾಗರಾಜ ನಾಯ್ಕ್, ಸುರೇಶ್ ನಾಯ್ಕ್ ಕುಟುಂಬಕ್ಕೆ ಜೀವಭಯವಿದ್ದು,ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬಂಟ್ವಾಳ ತಹಶೀಲ್ದಾರರನ್ನು ಮನವಿ ಮೂಲಕ ಅವರು ಒತ್ತಾಯಿಸಿದ್ದಾರೆ.

ತಾಲೂಕಿನ ಪುಣಚ ಗ್ರಾಮದ ಸುಣ್ಣಂಗಳ ನಾಗರಾಜ ನಾಯ್ಕ್ ಮತ್ತು ರಾಮಣ್ಣ ನಾಯ್ಕ ಕುಟುಂಬಗಳ ನಡುವೆ ರಸ್ತೆ ನಿರ್ಮಾಣಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿದ್ದು, ಪುತ್ತೂರಿನ ಗಿರಿಧರ್ ನಾಯ್ಕ ಎಂಬವರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅಕ್ರಮ ಕೂಟ ಸೇರಿಕೊಂಡು ಹಿಟಾಚಿ ಮೂಲಕ ನಾಗರಾಜ ನಾಯ್ಕ್ ಅವರ ತಂದೆಯ ವರ್ಗ ಜಮೀನಿನಲ್ಲಿ ಬಂಟ್ವಾಳ ಕಂದಾಯಾಧಿಕಾರಿಗಳ ಹೆಸರೆಳಿಕೊಂಡು ರಸ್ತೆ ನಿರ್ಮಿಸಲು ಮುಂದಾಗಿದ್ದು,ಇದರಿಂದಾಗಿ ಇಲ್ಲಿದ್ದ ಕೃಷಿ ನಾಶವಾಗಿದೆ.ಇದನ್ನು ಪ್ರಶ್ನಿಸಿದ ನಾಗರಾಜ ಮತ್ತು ಸುರೇಶ್ ಕುಟುಂಬಗಳಿಗೆ ಹಲ್ಲೆಗೈದಿದ್ದಲ್ಲದೆಜೀವಬೆದರಿಕೆಯನ್ನು ಒಡ್ಡಿದ್ದಾರೆ.

ಈ ನಡುವೆ ಸರ್ವೇ ನಡೆಸಿದಾಗ ಇದು ದಿ. ಲಕ್ಷ್ಮಣ ನಾಯ್ಕ್ ಅವರ ವರ್ಗಜಾಗ ಎಂದು ಸಾಬೀತಾಗಿದೆ ಎಂದು ಅವರು ವಿವರಿಸಿದರು. ಬಳಿಕ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಲು ಬಂದಿದ್ದ ಕಂದಾಯ ಅಧಿಕಾರಿಗಳ ಎದುರಿನಲ್ಲೇ ಸಂಘರ್ಷ ನಡೆದಿದ್ದು ಎರಡು ಕುಟುಂಬಗಳ ವಿರುದ್ಧವು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಇಂತಹ ಸನ್ನಿವೇಶ ಉಂಟಾಗಲು ವಿಟ್ಲ ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಇಲಾಖಾಧಿಕಾರಿಗಳು ಕಾರಣ ಎಂದು ಸೇಸಪ್ಪ ಬೆದ್ರಕಾಡು ಅವರು ಆರೋಪಿಸಿದ್ದಾರೆ. ಗಿರಿಧರ ನಾಯ್ಕ್, ರಾಮಣ್ಣ ನಾಯ್ಕ್ ಮತ್ತವರ ಸಹಚರರಿಂದ ಮುಂದಿನ ದಿನದಲ್ಲಿ ತನಗೆ ಹಾಗೂ ಸಂತ್ರಸ್ತ ಎರಡು ಕುಂಬಗಳಿಗೆ ಜೀವಕ್ಕೆ ಅಪಾಯವಾದರೆ ಕಂದಾಯ ಮತ್ತು ಪೊಲೀಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ.ಹಾಗಾಗಿ ನಮಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿದ್ದಾರೆ.

ಜಾಗದ ಮಾಲಕಿ ಕುಸುಮ, ಇವರ ಮಕ್ಕಳಾದ ನಾಗರಾಜ, ಭಾರತಿ ಮತ್ತು ನೆರೆಯ ಮನೆಯವರಾದ ವನಿತಾ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article