ಮೂಡುಬಿದಿರೆಯ ಯುವತಿ ಗುರುಪುರ ನದಿಗೆ ಹಾರಿ ಆತ್ಮಹತ್ಯೆ

ಮೂಡುಬಿದಿರೆಯ ಯುವತಿ ಗುರುಪುರ ನದಿಗೆ ಹಾರಿ ಆತ್ಮಹತ್ಯೆ


ಮೂಡುಬಿದಿರೆ: ಮೂಡುಬಿದಿರೆಯ ಯುವತಿಯೊಬ್ಬಳು ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. 

ಮೂಡುಬಿದಿರೆ ಗಾಂಧಿನಗರ ನಿವಾಸಿ ಅಲಂಕಾರ್ ಟೆಕ್ಸ್ ಟೈನ್ಸ್ ನ ಉದ್ಯೋಗಿ ನವ್ಯ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡವಳು. 

ನವ್ಯಳ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ನವ್ಯಳೊಂದಿಗೆ ನಿಡ್ಡೋಡಿ ಮೂಲದ ಮತ್ತೋರ್ವಳು ಯುವತಿ ಕೂಡಾ ಇದ್ದಳೆನ್ನಲಾಗಿದ್ದು ಈ ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುರುಪುರದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರಿಗೆ ಈ ಘಟನೆ ಬಗ್ಗೆ ಗೊತ್ತಾಗಿ ಕೂಡಲೇ ತಮ್ಮ ಬೆಂಬಲಿಗರೊಂದಿಗೆ ಶವ ಮೇಲಕ್ಕೆತ್ತಲು ಬೇಕಾದ ವ್ಯವಸ್ಥೆ ಮಾಡುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article