ಸರ್ವೋದಯದ ಸಕಾರಾತ್ಮಕ ಬಜೆಟ್: ರಾಜೇಶ್ ನ್ಯಾಕ್ ಉಳಿಪಾಡಿ
ಬಂಟ್ವಾಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿಗೆ ಮಂಡಿಸಿರುವ ಕೇಂದ್ರದ ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. ‘ವಿಕಸಿತ ಭಾರತ’ದ ಮಹಾತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳುವಲ್ಲಿ ದಿಕ್ಸೂಚಿಯಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿ ಪ್ರತಿಕ್ರಿಯಿಸಿದರು.
ಈ ಬಜೆಟ್‌ನಲ್ಲಿ ಜನಪ್ರಿಯತೆಗಿಂತ ಜನಹಿತಕ್ಕೆ, ಮಾತಿಗಿಂತ ಸುಧಾರಣೆಗೆ, ಅಸ್ಪಷ್ಟತೆಗಿಂತ ನಿಖರವಾದ ಕೆಲಸಕ್ಕೆ ಪ್ರಾಮುಖ್ಯತೆ ನೀಡಿದೆ. ಅದಲ್ಲದೆ ವಿಶೇಷ ಚೇತನರಿಗೆ ಉದ್ಯೋಗವಕಾಶ, ಮಾನಸಿಕ ಆರೋಗ್ಯ ಸಂಸ್ಥೆಗಳ ಉನ್ನತೀಕರಣ, ಕ್ಯಾನ್ಸರ್ ರೋಗಿಗಳಿಗಾಗಿ 17 ಔಷಧಗಳ ಮೇಲೆ ಸುಂಕ ವಿನಾಯಿತಿ ನೀಡಿರುವುದು ಜನಪರ ಬಜೆಟ್ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ, ಈ ಬಜೆಟ್ ಬಡವರು, ವಂಚಿತರು, ಮಹಿಳೆಯರು ಮತ್ತು ಹಿಂದುಳಿದಿರುವವರ ಮೇಲೆ ಗಮನ ಹರಿಸಿದ್ದು,ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ನ್ಯಾಯ ಸಾಧ್ಯವಾಗಲಿದೆ.ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ವಾಸ್ತವಿಕ ಬಜೆಟ್ ಎನ್ನುವುದರಲ್ಲಿ ಸಂಶಯವಿಲ್ಲ ಎಂದು ರಾಜೇಶ್ ನ್ಯಾಕ್ ಉಳಿಪಾಡಿ ಪ್ರತಿಕ್ರಿಯಿಸಿದರು.