ಮಕ್ಕಳ ಭವಿಷ್ಯವನ್ನು ರೂಪಿಸಲು ಸಂಸ್ಕಾರಯುತ ಶಿಕ್ಷಣಕ್ಕೆ ಕ್ರಿಯಾಯೋಜನೆ: ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ಮೂಡುಬಿದಿರೆಯಲ್ಲಿ ಸಂತ ಸಮ್ಮೇಳನ
ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಅದಮಾರು ಮಠದ ಈಶ ಪ್ರಿಯ ಸ್ವಾಮೀಜಿ, ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ , ಆನೆಗುಂದಿ ಸರಸ್ವತೀ ಸಂಸ್ಥಾನದ ಕಾಳ ಹಸ್ತೇಂದ್ರ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಮಂಗಳೂರು ಓಂ ಶ್ರೀ ಮಠದ ನಿತ್ಯಾನಂದ ಸ್ವಾಮೀಜಿ, ಕೈಲಾಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಬಲ್ಯೊಟ್ಟು ವಿಖ್ಯಾತಾನಂದ ಸ್ವಾಮೀಜಿ, ಕನ್ಯಾನಾಶ್ರಮದ ವಿದ್ಯಾನಂದ ಸ್ವಾಮೀಜಿ ಹಾಗೂ ಬಾಳೆಕುದ್ರು ಮಠದ ವಾಸುದೇವ ಸ್ವಾಮೀಜಿ ಸೇರಿದಂತೆ ಕರಾವಳಿ ಹಾಗೂ ಉತ್ತರ ಕನ್ನಡ ಸಹಿತ ಆರು ಜಿಲ್ಲೆಗಳ ವಿವಿಧ ಮಠದ ಸ್ವಾಮೀಜಿಗಳು ಭಾಗವಹಿಸಿದ್ದರು.
ಶಾಸಕ ಉಮಾನಾಥ ಕೋಟ್ಯಾನ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಭೇಟಿ ನೀಡಿದರು.
ಕಾರ್ಯಕ್ರಮಕ್ಕೆ ಮೊದಲು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಬಡಗಬಸದಿಯಿಂದ ಜೈನಮಠಕ್ಕೆ ಸ್ವಾಮೀಜಿಗಳ ಮೆರವಣೆಗೆ ನಡೆಯಿತು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಂದಶ೯ನ್ ಎಂ., ಉದ್ಯಮಿ ಕೆ. ಶ್ರೀಪತಿ ಭಟ್, ಸಮಿತಿ ಸಂಚಾಲಕರಾದ ಬಾಹುಬಲಿ ಪ್ರಸಾದ್, ಪ್ರಮುಖರಾದ ದಯಾನಂದ ಪೈ, ಶಾಂತರಾಮ ಕುಡ್ವ, ರಾಘವೇಂದ್ರ ಭಂಡಾರ್ಕರ್, ಸುರೇಂದ್ರ ಪೈ, ಬ್ಯಾಂಕ್ ನಿವೃತ್ತ ಅಧಿಕಾರ ಸುಧೀರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಮಹಾವೀರ ಭವನದಲ್ಲಿ ನಡೆದ ಸಂತರ ಸಮೇಳನದಲ್ಲಿ ವಿವಿಧ ರೀತಿಯ ಚಚೆ೯ಗಳು ನಡೆದು, ಸನಾತನ ಹಿಂದೂ ಧಮ೯ದ ಸಾರಾಂಶವನ್ನು ಒಳಗೊಂಡಿರುವ ಧಮ೯ಗ್ರಂಥವನ್ನು ಭಾರತೀಯ ಸಂತ ಮಹಾಪರಿಷತ್ ವತಿಯಿಂದ ಪ್ರಕಟಿಸಲಾಗಿದ್ದು ಇದನ್ನು ತಾಲೂಕಿನಲ್ಲಿರುವ ಮನೆ ಮನೆಗಳಿಗೆ ತಲುಪಿಸಿ ಧಮ೯ದ ಜಾಗೃತಿಯನ್ನು ಮೂಡಿಸಬೇಕು.
*ತಾಲೂಕುಗಳಲ್ಲಿರುವ ಮಠಗಳು, ದೇವಸ್ಥಾನಗಳು ಸೇರಿ ತರಗತಿಗಳನ್ನು ಆರಂಭಿಸುವ ಮೂಲಕ ಜಾಗೃತಿಯನ್ನು ಮೂಡಿಸಬೇಕು ಮತ್ತು ಮಠ, ಮಂದಿರಗಳು ಗುರುಕಲ ಮಾದರಿಯ ಶಿಕ್ಷಣ ಕೇಂದ್ರಗಳನ್ನು ತೆರೆಯಬೇಕೆಂದು ಸಮಾವೇಶದಲ್ಲಿ ನಿಣ೯ಯ ಕೈಗೊಳ್ಳಲಾಯಿತು.


