ಸಂತ ಫಿಲೋಮಿನಾ ಕಾಲೇಜಿನಲ್ಲಿ 32 ಗಂಟೆಗಳ ಹ್ಯಾಕಥಾನ್ ಇನ್ನೊವೇಟ್ ಹ್ಯಾಕ್ 2K26 ಸಂಪನ್ನ
ಕಾಲೇಜಿನ ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್‌ನ ಡಿಸ್ಟ್ರಿಕ್ಟ್ ಇನ್ನೊವೇಟಿವ್ ಅಸೋಸಿಯೇಟ್ ಅಭಿಷೇಕ್ ಸುವರ್ಣ ಸ್ವಾಗತಿಸಿದರು. ಕಾಲೇಜಿನ ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್‌ನ ಎಂಐಎಸ್ ಎಕ್ಸಿಕ್ಯೂಟಿವ್ ಡಾ. ಗೀತಾ ಪೂರ್ಣಿಮಾ ಕೆ. ವಂದಿಸಿದರು. ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್‌ನ ಪ್ರಾಜೆಕ್ಟ್ ಸಂಯೋಜಕ ಡಾ. ವಿನಯಚಂದ್ರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದ್ವಿತೀಯ ಬಿಸಿಎ (ಎಐಎಂಲ್)ನ ವಿದ್ಯಾರ್ಥಿನಿ ಶೀತಲ್ ಹಾಗೂ ಪ್ರಥಮ ಎಂಸಿಎ ವಿದ್ಯಾರ್ಥಿನಿ ಡೆಲಿಶಾ ಲೋಬೋ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಕಾಲೇಜಿನ ಐಐಸಿ ಘಟಕದ ಸದಸ್ಯೆ ಸುರಕ್ಷಾ ಎಸ್. ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಇನ್ಯುನಿಟಿ ಉದ್ಯೋಗಿಗಳಾದ ಅನುಭವ್, ಧನುಷ್, ನಿಖಿಲ್ ಹಾಗೂ ಪುತ್ತೂರಿನ ‘ದ ವೆಬ್ ಪೀಪಲ್’ ಸಂಸ್ಥೆಯ ವೇಣುಗೋಪಾಲ್ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಪಿ.ಎಂ. ವೇಣುಗೋಪಾಲ್, ಕಾರ್ತಿಕ್ ಕೆ.ಆರ್., ಹವ್ಯಾಸ್, ಜೀವನ್, ದಿಶಾ ಪರ್ಲ್ ಮಸ್ಕರೇನಸ್, ಗೌರೀಶ್, ಹಾಗೂ ಮಹಮ್ಮದ್ ಆಶಿಕ್ ವಿದ್ಯಾರ್ಥಿಗಳ ತಂಡಗಳಿಗೆ ಮೆಂಟರ್ಗಳಾಗಿ ಸಹಕರಿಸಿದರು.
ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರವಿಭಾಗದ ಸಂಯೋಜಕ ಹಾಗೂ ಐಐಸಿ ಘಟಕದ ಸದಸ್ಯ ಹರ್ಷಿತ್ ಆರ್. ಲಾಜಿಸ್ಟಿಕ್ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿದರು. ಇನ್ನೊವೇಟ್ ಹ್ಯಾಕ್‌ನ ತಾಂತ್ರಿಕ ಸಮಿತಿಯ ಮುಖ್ಯಸ್ತೆಯಾಗಿ ಸ್ನಾತಕೋತ್ತರ ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಬಿ. ಕರ್ತವ್ಯ ನಿರ್ವಹಿಸಿದರು.
ಸಹಾಯಕ ಪ್ರಾಧ್ಯಾಪಕ ನೀಲಮ್ ಕುಟ್ಟಪ್ಪ, ರಶ್ಮಿ ವಿ. ಹಾಗೂ ಶೋಧನ್ ಪಿಜಿ 32 ಗಂಟೆಗಳ ಕಾಲವೂ ವಿದ್ಯಾರ್ಥಿಗಳ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದರು.
ಕಾಲೇಜಿನ ದ್ವಿತೀಯ ಬಿಬಿಎ ತರಗತಿಯ ಲಿಖಿತ್, ಭವತ್, ಪ್ರಣಾಮ್, ಸುಮಂತ್ ಹಾಗೂ ಪ್ರಕೃತ್ ಕಾರ್ಯಕ್ರಮಕ್ಕೆ ಸರ್ವರೀತಿಯ ಸಹಕಾರ ನೀಡಿದರು.
ಹ್ಯಾಕಥಾನ್‌ನಲ್ಲಿ ಎಜುಟೆಕ್, ಅಗ್ರಿಟೆಕ್, ಸ್ಮಾರ್ಟ್ ಸಿಟಿ ಮತ್ತು ಸುಸ್ಥಿರ ಪರಿಸರ ಎಂಬ ಮೂರು ವಿಭಾಗಗಳಿದ್ದು ತಲಾ 9, 9 ಹಾಗೂ 8 ತಂಡಗಳು ಈ ವಿಭಾಗಗಳನ್ನು ಆಯ್ಕೆ ಮಾಡಿದ್ದವು. ಎಜುಟೆಕ್ ವಿಭಾಗದಲ್ಲಿ ಕೋಡ್ ಕ್ಯಾಟಲಿಸ್ಟ್ ತಂಡ, ಅಗ್ರಿ ಟೆಕ್ ವಿಭಾಗದಲ್ಲಿ ಡೆವೆಕ್ಸ್ ತಂಡ, ಸ್ಮಾರ್ಟ್ ಸಿಟಿ ವಿಭಾಗದಲ್ಲಿ ಲಾಜಿಕ್ ಲೂಪ್ ತಂಡಗಳು ತಲಾ 1000 ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆದವು.
ಎಜುಟೆಕ್ ವಿಭಾಗದಲ್ಲಿ ಹ್ಯಾಕ್ ವರ್ಸ್ ತಂಡ, ಅಗ್ರಿ ಟೆಕ್ ವಿಭಾಗದಲ್ಲಿ ಮೈಂಡ್ ಫೋರ್ಜ್ ತಂಡ ಸ್ಮಾರ್ಟ್ ಸಿಟಿ ವಿಭಾಗದಲ್ಲಿ ಕೋಡ್ ಆಫ್ ಡ್ಯೂಟಿ ತಂಡಗಳು ವಿಶೇಷ ವಿಭಾಗದಲ್ಲಿ ತಲಾ 2000 ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆದವು. ಆಸ್ಟ್ರೋಸ್ ತಂಡವು 7500 ರೂ. ಹಾಗೂ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ, ಹ್ಯಾಕ್ ಸ್ಪ್ರಿಂಟ್ ತಂಡವು 5000 ರೂ. ಹಾಗೂ ಟ್ರೋಫಿಯೊಂದಿಗೆ ದ್ವಿತೀಯ ಬಹುಮಾನ ಮತ್ತು ಇನ್ನೊವೇಟ್ರಿಕ್ಸ್ ತಂಡವು ನಗದು ಹಣದೊಂದಿಗೆ ಹಾಗೂ ಟ್ರೋಫಿಯೊಂದಿಗೆ ತೃತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡವು.
‘ಕಾಲೇಜಿನಲ್ಲಿ ಇನ್ಸ್ಟಿಟ್ಯೂಶನ್ ಇನ್ನೊವೇಶನ್ ಕೌನ್ಸಿಲ್ ಪ್ರಾರಂಭವಾದಂದಿನಿಂದ ನಾವೀನ್ಯತೆ ಮತ್ತು ಕ್ರಿಯಾತ್ಮಕತೆಯನ್ನು ಪ್ರೋತ್ಸಾಹಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು.
ಕಾಲೇಜಿನ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನಸ್‌ರ ಮುಂದಾಳುತ್ವ ಹಾಗೂ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊರ ದೂರದರ್ಶಿತ್ವದ ಫಲವಾಗಿ ಕಾಲೇಜಿನಲ್ಲಿ ಇನೊವೇಶನ್ ಸೆಂಟರ್ ಸ್ಥಾಪನೆಗೊಂಡಿತು.
ಈ ಸೆಂಟರ್‌ನಲ್ಲಿ ಕ್ರಿಯಾತ್ಮಕತೆ ಮತ್ತು ರಚನಾತ್ಮಕತೆಗಳನ್ನು ಉತ್ತೇಜಿಸುವ 8 ಗಂಟೆಗಳ ಹ್ಯಾಕಥಾನ್ ಅನ್ನು ಕೆಲಸಮಯದ ಹಿಂದೆ ಆಯೋಜಿಸಲಾಗಿತ್ತು. ಪುತ್ತೂರಿನ ಇತಿಹಾಸದಲ್ಲೇ ಪ್ರಥಮಬಾರಿಗೆ ನಮ್ಮ ಕನಸಿನ ಕೂಸಾದ 32 ಗಂಟೆಗಳ ನಿರಂತದ ಹ್ಯಾಕಥಾನ್ ಇನ್ನೊವೇಟ್ ಹ್ಯಾಕ್ 2K26 ಅನ್ನು ಆಯೋಜಿಸಿರುವುದು ಹೆಮ್ಮೆ ಹಾಗೂ ಸಂತಸದ ವಿಚಾರವಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ತಮ್ಮ ಆಲೋಚನೆಗಳನ್ನು ಪರಿಷ್ಕರಣೆ ಮಾಡಲು ಸಹಕಾರ ನೀಡಿದ ಸ್ಕೂಲ್ ಆಫ್ ಇಂಜಿನಿಯರಿಂಗ್, ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಡೀನ್ ಡಾ. ರೂಬನ್ ಎಸ್, ಕಾಲೇಜಿನಲ್ಲಿ ನಡೆದ ವಿವಿಧ ಹ್ಯಾಕಥಾನ್ ಸ್ಪರ್ಥೆದಳಲ್ಲಿ ಭಾಗವಹಿಸಿದ ತಮ್ಮ ಅನುಭವಗಳನ್ನು ಮುಂದಿನ ಪೀಳಿಗೆಗೆ ಹಂಚಿಕೊಂಡ ನಮ್ಮ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿಗಳಿಗೆ, ನಮ್ಮೊಂದಿಗೆ ವಿವಿಧ ರೀತಿಯಲ್ಲಿ ಕೈ ಜೋಡಿಸಿದ ‘ದ ವೆಬ್ ಪೀಪಲ್’, ಪುತ್ತೂರು, ಟೆಕ್ ಗ್ರೇ ಲಾಜಿಕ್ಸ್ ಮಂಗಳೂರು, ಎಲ್ ಪಾಯಿಂಟ್ ಮಂಗಳೂರು, ಆರ್.ವಿ. ಇಂಟರ್‌ಗ್ರಾಫಿಕ್ಸ್ ಪುತ್ತೂರು ಹಾಗೂ ಸೋಜಾ ಕಂಪ್ಯೂಟರ್ಸ್ ಪುತ್ತೂರು ಇವರಿಗೆ ಧನ್ಯವಾದಗಳು. ತಲಾ ಮೂರು ಮತ್ತು ನಾಲ್ಕು ಜನರನ್ನೊಳಗೊಂಡ 30 ತಂಡಗಳಿದ್ದು ಪ್ರಥಮ ಹಂತದ ನಂತರದಲ್ಲಿ 26 ತಂಡಗಳನ್ನು ಆಯ್ಕೆಮಾಡಲಾಯಿತು. ಆಯ್ಕೆಯಾದ 26 ತಂಡಗಳೂ ಹೊಸ ಹೊಸ ಆಲೋಚನೆಗಳೊಂದಿಗೆ ಮುಂದೆ ಬಂದಿರುತ್ತವೆ. - ಡಾ. ವಿನಯಚಂದ್ರ, ಪ್ರಾಜೆಕ್ಟ್ ಸಂಯೋಜಕರು, ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್, ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು.



