ಕೊಪ್ಪಲಂಗಡಿ ವಾಸುದೇವ ಸ್ವಾಮಿ ದೇವಸ್ಥಾನದಿಂದ ಕಟೀಲಿಗೆ ಪಾದಯಾತ್ರೆ: 400ಕ್ಕೂ ಅಧಿಕ ಮಂದಿ ಭಾಗಿ

ಕೊಪ್ಪಲಂಗಡಿ ವಾಸುದೇವ ಸ್ವಾಮಿ ದೇವಸ್ಥಾನದಿಂದ ಕಟೀಲಿಗೆ ಪಾದಯಾತ್ರೆ: 400ಕ್ಕೂ ಅಧಿಕ ಮಂದಿ ಭಾಗಿ


ಕಾಪು: ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ನೇತೃತ್ವದಲ್ಲಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಕಟೀಲಿಗೆ ಶನಿವಾರ ಎಂಟನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.


ತಂತ್ರಿಗಳಾದ ವೇ.ಮೂ. ಶ್ರೀಶ ತಂತ್ರಿ ಅವರ ನೇತೃತ್ವದಲ್ಲಿ ಅರ್ಚಕ ನಾಗರಾಜ ಭಟ್ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ನೇರವೇರಿಸಿದ ಬಳಿಕ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಪಾದಯಾತ್ರೆಗೆ ಚಾಲನೆ ನೀಡಿದರು.


400ಕ್ಕೂ ಅಧಿಕ ಮಂದಿ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರವಿ ಕುಮಾರ್ ಮಂದಾರ, ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಉದಯ್ ಶೆಟ್ಟಿ ಅಧ್ಯಕ್ಷನಾಗೇಶ್ ಸಾಲ್ಯಾನ್, ಪ್ರಮುಖರಾದ ಅನಿಲ್ ಶೆಟ್ಟಿ ಉಮೇಶ್ ಪೂಜಾರಿ, ರಘುರಾಮ ಶೆಟ್ಟಿ ಹರೀಶ್, ದಿವಾಕರ ಶೆಟ್ಟಿ ಮಲ್ಲಾರು, ರವಿ ಬಿಂದಾಸ್, ಸಚಿನ್ ರಾಮನಗರ ಮೊದಲಾದವರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article