ಏ.12 ರಂದು ಕೋಟದಲ್ಲಿ ಜೈ ಕುಂದಾಪ್ರ ಸಂಭ್ರಮ-2026
Monday, April 6, 2026
ಕುಂದಾಪುರ: ಉಡುಪಿ ಜಿಲ್ಲೆಯ ಸಾಮಾಜಿಕ ಕಳಕಳಿ ಹಾಗೂ ರಕ್ತದಾನ ದಂತಹ ಕಾರ್ಯಕ್ರಮಗಳಿಂದ ಮನೆಮಾತಾದ ಸಂಸ್ಥೆ ಕುಂದಾಪುರದ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) "ನೊಂದವರಿಗೆ ನೆರವಿನ ದಾರಿ ದೀಪ, ಯುವ ಮನಸ್ಸುಗಳಿಗೆ ಸ್ಪೂರ್ತಿ" ಎಂಬ ಧ್ಯೇಯದೊಂದಿಗೆ ಇದೇ ಮೊದಲ ಭಾರಿಗೆ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುತ್ತಿದ್ದು ಇದೇ ಬರುವ ಏ.12 ರಂದು ಕೋಟದಲ್ಲಿ 'ಜೈ ಕುಂದಾಪ್ರ ಸಂಭ್ರಮ-2026' ಎಂಬ ಶೀರ್ಷಿಕೆಯಡಿ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ನಡೆಯಲಿದೆ.
ಈ ವೇದಿಕೆಯಲ್ಲಿ ಕೋಟದ ಕ್ರಿಯಾಶೀಲ ಸಂಘಟನೆಯಾದ ಪಂಚವರ್ಣ ಸಂಘಟನೆಗೆ ,"ಜೈ ಕುಂದಾಪ್ರ ಸೇವಾ ಪುರಸ್ಕಾರ-2026" ನೀಡಿ ಗೌರವಿಸಲಿದೆ.
ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಮಾಜ ಸೇವಕ ಕೋಟ ಶ್ರೀಕಾಂತ್ ಶೆಣೈ, ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್, ಧಾರ್ಮಿಕ ಮುಖಂಡ ಕೆ.ಭಾಸ್ಕರ್ ಸ್ವಾಮಿ ಇವರುಗಳಿಗೆ ವಿಶೇಷ ಅಭಿನಂದನೆ ಹಾಗೂ ಅಶಕ್ತರಿಗೆ ನೆರವು,ವಿಶೇಷ ಚೇತನರಿಗೆ ಕಿಟ್ ವಿತರಣೆ, ಸಹಾಯ ಹಸ್ತ ಹಸ್ತಾಂತರ, ಸಾಂಸ್ಕೃತಿಕ ಕಾರ್ಯಕ್ರಮ, ತ್ರಿನೇತ್ರ ಕಲಾವಿದರು ಕುಡ್ಲ ಇವರಿಂದ ನಾಟಕ ಬ್ರಹ್ಮ ರಕ್ಕಸೆ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಪ್ರಮುಖರಾದ ಪುಂಡಲಿಕ ಮೊಗವೀರ, ಜಯರಾಜ್ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.