ಮಹಿಳೆಯರಿಗೆ ಆರೋಗ್ಯ ಮಾಹಿತಿ ಶಿಬಿರ

ಮಹಿಳೆಯರಿಗೆ ಆರೋಗ್ಯ ಮಾಹಿತಿ ಶಿಬಿರ


ಮಂಗಳೂರು: ಆಮ್ ಆದ್ಮಿ ಪಕ್ಷ ಮಂಗಳೂರು ವತಿಯಿಂದ ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಶಿಬಿರ ಎ.11 ರಂದು ಡಾನ್ ಬಾಸ್ಕೋ ಹಾಲ್ ಬಳಿಯ ಪಕ್ಷದ ಕಚೇರಿಯಲ್ಲಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಅವರು ಮೆನಾಫಾಸ್ ಬಗ್ಗೆ ಮಾಹಿತಿ ನೀಡಿದರು. 

ದೆಹಲಿ ಹಾಗೂ ಪಂಜಾಬಿನಲ್ಲಿ ಜನಹಿತ ಕೆಲಸ ಮಾಡಿ ಇತರ ಪಕ್ಷಗಳಿಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಮ್ ಆದ್ಮಿ ಪಕ್ಷ ಮಂಗಳೂರು ಪರಿಸರದಲ್ಲೂ ಜನಹಿತ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ ಎಂದು ವೆಂಕಟೇಶ್ ಬಾಳಿಗಾ ಶುಭ ಕೋರಿದರು. 

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾನನ್ ಪಿಂಟೋ, ಜಿಲ್ಲಾ ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಮಹಿಳಾ ಘಟಕದ ಸದಸ್ಯೆ ಸುಜಾತ ಹಾಗು ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಬಜಿಲಕೇರಿ ಉಪಸ್ಥಿತರಿದ್ದರು. 

ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ ಸ್ವಾಗತಿಸಿದರು. 

ವಿದ್ಯಾ ರಾಕೇಶ್ ಅವರು ಕೇಶ ವಿನ್ಯಾಸ, ಸರಳ ಮೇಕಪ್, ಸೀರೆ ಧರಿಸುವಿಕೆಯ ಕೌಶಲ್ಯ ತರಬೇತಿ ನೀಡಿದರು. ಸುಮಾರು 50 ಶಿಬಿರಾರ್ಥಿಗಳು ಶಿಬಿರದ ಉಪಯೋಗ ಪಡಕೊಂಡರು. ಜಯರಾಮ್ ಶೆಟ್ಟಿ ಅಲ್ತಾರು ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article