ಕ್ಷೇತ್ರ ವಿಂಗಡನಾ ಮಹಿಳಾ ಮೀಸಲಾತಿ ಮಸೂದೆ ಸೋಲಿನಿಂದ ಪ್ರಜಾತಂತ್ರಕ್ಕೆ ಗೆಲುವು: ಅಪ್ಪಿ

ಕ್ಷೇತ್ರ ವಿಂಗಡನಾ ಮಹಿಳಾ ಮೀಸಲಾತಿ ಮಸೂದೆ ಸೋಲಿನಿಂದ ಪ್ರಜಾತಂತ್ರಕ್ಕೆ ಗೆಲುವು: ಅಪ್ಪಿ

ಮಂಗಳೂರು: ಕ್ಷೇತ್ರ ವಿಂಗಡನಾ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸುವ ಮೂಲಕ ರಾಹುಲ್ ಗಾಂಧಿ ಹಾಗೂ ಮಿತ್ರ ಕೂಟವು ಪ್ರಜಾತಂತ್ರವನ್ನು  ಗೆಲ್ಲಿಸಿದೆ ಎಂದು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷೆ ಅಪ್ಪಿ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಮಸೂದೆ ಅಂಗೀಕಾರವಾಗಿರುತ್ತಿದ್ದರೆ ದಕ್ಷಿಣ ಭಾರತದ ಜನರಿಗೆ  ಅದರಲ್ಲೂ ಮಹಿಳೆಯರಿಗೆ ಅನ್ಯಾಯವಾಗುತ್ತಿತ್ತು ಎಂದರು.

ಕೇಂದ್ರ ಸರಕಾರವು 2023ರಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಹೇಳಿದ ಅವರು, ಬಿಜೆಪಿ ಮಹಿಳೆಯರು  ಕಾಂಗ್ರೆಸ್‌ಗೆ ಮಹಿಳಾ ಪರ ಪಾಠವನ್ನು ಹೇಳುವ ನೈತಿಕತೆ ಇಲ್ಲ. ದೇಶದ ಇತಿಹಾಸದಲ್ಲಿ ಮಹಿಳಾ ಪ್ರಧಾನಿ, ಮಹಿಳಾ ರಾಷ್ಟ್ರಪತಿಯನ್ನು ನೀಡಿದ ಖ್ಯಾತಿ ಕಾಂಗ್ರೆಸ್‌ಗಿದೆ. ಮಹಿಳೆಯರ ಬಗ್ಗೆ ಕಾಂಗ್ರೆಸ್ ಉತ್ತಮ ಯೋಜನೆ, ಕೆಲಸ ಕಾರ್ಯಗಳನ್ನು ಮಾಡಿದೆ. ಹಾಗಾಗಿ ಬಿಜೆಪಿಗೆ ಕಾಂಗ್ರೆಸನ್ನು ದೂರುವ ನೈತಿಕತೆ ಇಲ್ಲ. ಮಹಿಳೆಯರ ಬಗ್ಗೆ  ಅಷ್ಟೊಂದು ಕಾಳಜಿ, ಗೌರವ ಇದ್ದಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ಮಸೂದೆ ಯಥಾವತ್ತಾಗಿ ಜಾರಿಯಾಗಲಿ ಎಂದರು.

ಗೋಷ್ಟಿಯಲ್ಲಿ ಸ್ವರೂಪ ಶೆಟ್ಟಿ, ನೀತು ಡಿಸೋಜಾ, ಚಂದ್ರಕಲಾ ರಾವ್, ಸಬಿತಾ ಮಿಸ್ಕಿತ್, ವೀಣಾ, ಮೀನಾ ಟೆಲ್ಲಿಸ್, ಗೀತಾ ಪ್ರವೀಣ್, ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article