ಮಂಗಳೂರು ವಿವಿ ಕಬಡ್ಡಿ: ಆಳ್ವಾಸ್ ಪುರುಷ, ಮಹಿಳಾ ತಂಡಗಳು ಚಾಂಪಿಯನ್

ಮಂಗಳೂರು ವಿವಿ ಕಬಡ್ಡಿ: ಆಳ್ವಾಸ್ ಪುರುಷ, ಮಹಿಳಾ ತಂಡಗಳು ಚಾಂಪಿಯನ್


ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಕ್ರಮವಾಗಿ 10 ಹಾಗೂ 17 ಬಾರಿ ಚಾಂಪಿಯನ್ಸ್ ಪಟ್ಟ ಪಡೆದುಕೊಂಡಿತು. 


ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡವನ್ನು ಸೋಲಿಸಿ 10ನೇ ಬಾರಿ ರತ್ನವರ್ಮ ಹೆಗ್ಗಡೆ ರೋಲಿಂಗ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ತಂಡದ ಧನುಷ್ ಉತ್ತಮ ಹಿಡಿತಗಾರ ಹಾಗೂ ಸಾಯಿ ಪ್ರಸಾದ ಉತ್ತಮ ದಾಳಿಗಾರ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಮಹಿಳೆಯರ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡವನ್ನು ಪರಾಭವಗೊಳಿಸಿ ರೆವರೆಂಟ್ ಫಾದರ್ ಪತ್ರಾವೋ ರೋಲಿಂಗ್ ಟ್ರೋಫಿ ಹಾಗೂ ಶಾಶ್ವತ ಫಲಕವನ್ನು 17ನೇ ಬಾರಿ ತನ್ನದಾಗಿಸಿಕೊಂಡಿತು. ಆಳ್ವಾಸ್‌ನ ವಿನುಶ್ರೀ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದರೆ, ಸುಶ್ಮಿತಾ ಉತ್ತಮ ದಾಳಿಗಾರ್ತಿ ಪ್ರಶಸ್ತಿ ಪಡೆದರು. 

ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article