ಶಿತಾ೯ಡಿ ಗಾಳಿಗುಡ್ಡೆಯಲ್ಲಿ ಕರುಂಗೋಲು ಕುಣಿತದ ಆಚರಣೆ

ಶಿತಾ೯ಡಿ ಗಾಳಿಗುಡ್ಡೆಯಲ್ಲಿ ಕರುಂಗೋಲು ಕುಣಿತದ ಆಚರಣೆ


ಮೂಡುಬಿದಿರೆ: ಶ್ರೀ ಕ್ಷೇತ್ರ ಸತ್ಯಸಾರಮಾನಿ ಕಾನದ-ಕಟದ ದೈವಸ್ಥಾನ ಗಾಳಿಗುಡ್ಡೆ ಶಿರ್ತಾಡಿ  ಕರುಂಗೋಲು ಕುಣಿತದ ಆಚರಣೆ ನಡೆಯಿತು.

ತುಳುನಾಡ ಜಾನಪದ ಪ್ರಕಾರಗಳಲ್ಲಿ  ಕರುoಗೊಲು ಕುಣಿತಕ್ಕೆ ವಿಶೇಷ ಸ್ಥಾನಮಾನವಿದೆ. ಈ ಕುಣಿತವನ್ನು ಸುಗ್ಗಿ ಹುಣ್ಣಿಮೆಯ ಮೊದಲಿನ 

ಮೂರು ನಾಲ್ಕು ದಿನ ಅಂದರೆ ಪೂವೆ(ಹುಣ್ಣಿಮೆಯ ಹಿಂದಿನ ದಿನಗಳು )ಯಿಂದ ಪ್ರಾರಂಭಿಸಿ ಮೂರು ನಾಲ್ಕು ದಿನಗಳ ಕುಣಿತದ ನಂತರ ಒಂದು ದಿನದ " ರಾಶಿ ಪರ್ವ " ಸೇವೆಯು ನಡೆಯುತ್ತದೆ.


ಇದರ ಮೂಲ ಆಶಯ ತುಳುನಾಡಿನ ಕಾರಣಿಕ ದೈವಗಳಾದ ಅವಳಿ ವೀರರು "ಕಾನದ - ಕಟದರು" ತುಳುನಾಡಿಗೆ ಅತಿಕಾರೆ ಭತ್ತದ ಬೀಜವನ್ನು ಘಟ್ಟದಿಂದ ತಂದು ಸಾಗುವಳಿ ಮಾಡಿದ ಕಥೆಯ ಸಾರಾಂಶವೇ ಕರುಂಗೋಲು ಕುಣಿತ.

ಇದರ ಪಾಡ್ದನದ ಒಂದು ತುಣುಕು 

ಪೊಲಿಯೇ ಪೊಲಿಯೆರೆ ಪೊ ಪೂವೆ ಪೋಂಡು ಉಲ್ಲಾಯ ||2||

ಕೋಡಂದೆರೆ ಪುಣ್ಣಮೆ ಇನಿಯೋಡ ಉಲ್ಲಾಯ.

ಮಾಯಿದ ಪುಣ್ಣಮೆ ಮಾ ಯೋಡೇ ಪೋತುಂಡೇ.

ಸುಗ್ಗಿದ ಪುಣ್ಣಮೆ ಓಡಾದೇರೆ ಉಲ್ಲಾಯ.

ಕರುoಗೊಲು ಕನತುನು ಏರಂದು ಕೇoಡರ.

ಕರುಂಗೋಲು ಕನತುನ ಕಾನದ -ಕಟದೇರೆ.

ಶ್ರೀ ದೈವಸ್ಥಾನದ ಗೌರವ ಧ್ಯಕ್ಷರಾದ ಗೋಪಾಲ ಶಿರ್ತಾಡಿ, ಅಧ್ಯಕ್ಷರಾದ ರಮಾನಂದ ದಡ್ಡಲ್ಪಲ್ಕೆ,ಗುರಿಕಾರರಾದ ಸಂಜೀವ ಶಿರ್ತಾಡಿ, ಅರ್ಚಕರಾದ ಕರಿಯ ಹಾಗೂ ದೈವಸ್ಥಾನದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾಯ೯ಕ್ರಮದಲ್ಲಿ ರಾಕೇಶ್ ನಾರಾವಿ, ಸುದೀಪ್ ಶಿರ್ತಾಡಿ, ಸಂದೀಪ್ ಶಿರ್ತಾಡಿ, ಜಯ ಜೋಗೊಟ್ಟು ಮತ್ತಿತರರು  ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article