ಕೆಎಸ್ ಆರ್ ಟಿಸಿ ಬಸ್ಸುಗಳಿಗೆ ತಾತ್ಕಾಲಿಕ ತಂಗುದಾಣ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕೆಎಸ್ ಆರ್ ಟಿಸಿ ಬಸ್ಸುಗಳಿಗೆ ತಾತ್ಕಾಲಿಕ ತಂಗುದಾಣ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ


ಮೂಡುಬಿದಿರೆ: ಕೆಎಸ್ ಆರ್ ಟಿಸಿ ಬಸ್ಸುಗಳಿಗೆ ತಾತ್ಕಾಲಿಕ ತಂಗುದಾಣ ಒದಗಿಸುವ ನಿಟ್ಟಿನಲ್ಲಿ  ಪುರಸಭೆ ಮತ್ತು ಕೆಎಸ್ ಆರ್ ಟಿಸಿ ವಿಭಾಗದ ಅಧಿಕಾರಿಗಳು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.   

ಕೆಎಸ್ ಆರ್ ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ ಮೂಡುಬಿದಿರೆಯಲ್ಲಿ ಜನ ಮತ್ತು ವಾಹನ ದಟ್ಟನೆಯಿದೆ. ಇಲ್ಲಿ 1968ರಿಂದಲೂ ಖಾಸಗ ಬಸ್ಸುಗಳೇ ಓಡಾಟ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ನಾಲ್ಕು ಬಸ್ಸುಗಳು ಮಂಗಳೂರು-ಮೂಡುಬಿದಿರೆ- ಕಾಕ೯ಳಕ್ಕೆ ಬಂದು ಹೋಗುತ್ತಿದೆ. ಇದೀಗ ಮತ್ತೆ ನಾಲ್ಕು ಬಸ್ಸುಗಳು ಬರಲಿದ್ದು ಆಗ ತೊಂದರೆಯಾಗಲಿದೆ ಅದಕ್ಕಾಗಿ ಪುರಸಭೆಯ ಮನವಿಯ ಮೇರೆಗೆ ಈ ಕಡೆಯಲ್ಲಿ ನಿಲುಗಡೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದರು.

ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅವರು ಮಾತನಾಡಿ ಕೆಎಸ್ ಆರ್ ಟಿಸಿ ಬಸ್ ತಂಗುದಾಣ ಆಗುವವರೆಗೆ ಖಾಸಗಿ ವಾಹನಗಳನ್ನು ಪಾಕಿ೯ಂಗ್ ಮಾಡುವ ಅಧ೯ ಜಾಗದಲ್ಲಿ ಇದೀಗ ತಾತ್ಕಾಲಿಕ ನೆಲೆಯಲ್ಲಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಭಾರತೀಯ ರೈತ ಸೇನೆಯ ಜಿಲ್ಲಾ ಅಧ್ಯಕ್ಷ ಹರಿಪ್ರಸಾದ್ ನಾಯಕ್, ಕಾಯ೯ದಶಿ೯ ಶಿಮರಾಮ್ ಜೆ. ಶೆಟ್ಟಿ, ಕೆಎಸ್ ಆರ್ ಟಿಸಿಯ ಸಹಾಯಕ ಎಂಜಿನಿಯರ್ ಹರೀಶ್ ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article