ವಾಹನದಿಂದ ಢಿಕ್ಕಿ: ಬಂಧನ

ವಾಹನದಿಂದ ಢಿಕ್ಕಿ: ಬಂಧನ


ಮಂಗಳೂರು: ಕೆಲಸ ಮುಗಿಸಿ ಹೊಂದಿರುಗುವಾಗ ಹಿಂದಿನಿಂದ ಟಾಟಾ ಸುಮೊ ವಾಹನದಿಂದ ಢಿಕ್ಕಿ ಹೊಡೆದು ಗಾಯಗೊಳಿಸಿದ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತನನ್ನು ಧರ್ಮಸ್ಥಳ ನಿವಾಸಿ ಶರತ್ (33) ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ:

ಬೆಳ್ತಂಗಡಿ ಕಲ್ಮಂಜ ನಿವಾಸಿ ಬಾಲಕೃಷ್ಣ (43) ಅವರು ವಾಹನದಿಂದ ಢಿಕ್ಕಿ ಪಡಿಸಿ ಕೊಲ್ಲುವುದಾಗಿ ಕೆಲವು ತಿಂಗಳುಗಳ ಹಿಂದೆ ಬೆದರಿಸಿದ್ದು ಮಾತ್ರವಲ್ಲದೇ, ಜು.30 ರಂದು ಸಂಜೆ ಬಾಲಕೃಷ್ಣ ಅವರು ಕೆಲಸ ಮುಗಿಸಿಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ, ಶರತ್ ಕೊಲ್ಲುವ ಉದ್ದೇಶದಿಂದ ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಧರ್ಮಸ್ಥಳ ಗ್ರಾಮ ಕುರುಮಾನಿ ಕ್ರಾಸ್ ಬಳಿ ವಾಹನಕ್ಕೆ ಢಿಕ್ಕಿ ಪಡಿಸಿದ್ದಾನೆ.

ಅಪಘಾತದ ಪರಿಣಾಮ ಬಾಲಕೃಷ್ಣ ಅವರು ಗಾಯಗಳಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article