24 ಗಂಟೆಗಳ ಕಾಲ ನಿರಂತರ ದಾಸರ ಪದ ಗಾಯನ: ವಿಶ್ವ ದಾಖಲೆಗೆ ಮುಂದಾದ ಸಂಗೀತ ಬಾಲಚಂದ್ರ

24 ಗಂಟೆಗಳ ಕಾಲ ನಿರಂತರ ದಾಸರ ಪದ ಗಾಯನ: ವಿಶ್ವ ದಾಖಲೆಗೆ ಮುಂದಾದ ಸಂಗೀತ ಬಾಲಚಂದ್ರ


ಮಂಗಳೂರು: ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿರುವ ಆಕಾಶವಾಣಿಯ ಉನ್ನತ ಶ್ರೇಣಿಯ  ಕಲಾವಿದೆ ಹಾಗೂ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಪದಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಗೀತ ಬಾಲಚಂದ್ರ ಅವರು, ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ದಾಖಲೆಯ ಉದ್ದೇಶದೊಂದಿಗೆ ಈ ವಿಶಿಷ್ಟ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ‘ಪಂಚವಿಂಶತಿ’ ಎಂಬ ಹೆಸರಿನಲ್ಲಿ ನಡೆಯಲಿರುವ ಕಾರ್ಯಕ್ರಮವು ಉಡುಪಿಯ ಶ್ರೀಕೃಷ್ಣ ಮಠದ ಸಮೀಪದ ಗೀತಾ ಮಂದಿರದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಆ.23ರಂದು ಬೆಳಗ್ಗೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಆ.24ರಂದು ಬೆಳಗ್ಗೆ 7.30ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟು 25 ಗಂಟೆ, ಅಂದರೆ 1,500 ನಿಮಿಷಗಳ ಕಾಲ ನಿರಂತರ ದಾಸರ ಪದ ಗಾಯನ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಹೊಸದಾಗಿ ಸ್ವರಸಂಯೋಜನೆ ಮಾಡಲಾದ 250 ದಾಸರ ಪದಗಳನ್ನು ಪ್ರಸ್ತುತಪಡಿಸಲಾಗುವುದು. ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಹಾಗೂ ತಬಲಾ ವಾದಕರನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳು ನಿರಂತರ ಲೈವ್ ಸಂಗೀತ ಸಾಥ್ ನೀಡಲಿವೆ. 25 ವರ್ಷಗಳ ಸಂಗೀತ ಪಯಣದ ಹಿನ್ನೆಲೆಯಲ್ಲಿ ಕೈಗೊಳ್ಳುತ್ತಿರುವ ಈ ವಿಶ್ವ ದಾಖಲೆ ಪ್ರಯತ್ನವು ಮಹತ್ವದ ಮೈಲಿಗಲ್ಲಾಗಲಿದೆ. ದಾಸರ ಪದಗಳನ್ನೇ ಆಯ್ಕೆ ಮಾಡಿಕೊಂಡು ಇಷ್ಟೊಂದು ಸುದೀರ್ಘ ಅವಗೆ ನಿರಂತರವಾಗಿ ಗಾಯನ ನಡೆಸುತ್ತಿರುವುದು ರಾಜ್ಯದ ಸಂಗೀತ ಕ್ಷೇತ್ರದಲ್ಲೇ ಅಪರೂಪದ ಪ್ರಯತ್ನ ಎಂದರು.

ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಪ್ರಮುಖರಾದ ಗುರುರಾಜ್, ವೀಕ್ಷಿತ್, ಎ.ಕೆ. ವಿಜಯ್ ಕೋಕಿಲ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article