ಕೊಲೆ ಆರೋಪಿಗೆ 5 ವರ್ಷ ಶಿಕ್ಷೆ: 11 ಸಾವಿರ ದಂಡ

ಕೊಲೆ ಆರೋಪಿಗೆ 5 ವರ್ಷ ಶಿಕ್ಷೆ: 11 ಸಾವಿರ ದಂಡ


ಮಂಗಳೂರು: ಮೊಬೈಲ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಂಗಿಯ ತಲೆಗೆ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಿದ್ದ ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 5 ವರ್ಷ ಶಿಕ್ಷೆ ಹಾಗೂ 11 ಸಾವಿರ ದಂಡವನ್ನು ವಿಧಿಸಿದೆ.

ಘಟನೆಯ ವಿವರ:

ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ 08-10-2019 ರಂದು ಮಧ್ಯಾಹ್ನ ತನ್ನ ವಾಸದ ಮನೆಯಾದ ಕಂಬಳಪದವಿನಲ್ಲಿ ಆರೋಪಿಯು ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಎಂಬವಳೊಂದಿಗೆ ಮೊಬೈಲ್‌ನ್ನು ಉಪಯೋಗಿಸಲು ಕೊಡುವಂತೆ ಕೇಳಿದಾಗ ಮೊಬೈಲ್ ವಿಚಾರವಾಗಿ ಅವರೊಳಗೆ ಮಾತುಕತೆಯಾದ ಸಮಯಕ್ಕೆ ಕೋಪಗೊಂಡು ಆರೋಪಿತನು ಸುತ್ತಿಗೆಯಿಂದ ಆಕೆಯ ತಲೆಗೆ ಹಲ್ಲೆ ನಡೆಸಿ, ಆಕೆಯನ್ನು ಕೊಲೆ ಮಾಡಿ, ಆಕೆಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿರುವುದಾಗಿದೆ. 

ಮೃತಳ ತಂದೆ ಮಗಳು ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದು, ಮೊ.ನಂ 67/2019 ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಿಸಿರುತ್ತಾರೆ. ಈ ಪ್ರಕರಣವನ್ನು ಅಂದಿನ ದಕ್ಷಿಣ ಎಸಿಪಿ ಟಿ. ಕೋದಂಡ ರಾಮ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಕಲಂ 302, 201 ಐಪಿಸಿ ಪ್ರಕಾರ 10-01-2020 ರಂದು ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣದ ಕುರಿತು ನ್ಯಾಯಾಲಯವು ಆ.24 ರಂದು ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾನಿಗೆ ಕಲಂ 304 (ii) ಐಪಿಸಿಗೆ 4 ವರ್ಷ ಸಜೆ ಮತ್ತು 10,000 ರೂ. ದಂಡ, ಕಲಂ 201 ಐಪಿಸಿಗೆ 1 ವರ್ಷ ಸಜೆ ಮತ್ತು 1,000 ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ಅಭಿಯೋಜನ ಪರವಾಗಿ ಜ್ಯೋತಿ ಪ್ರಮೋದ ನಾಯಕ್ ಅವರು ವಾದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article