ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ
Saturday, August 29, 2026
ಮಂಗಳೂರು: ‘ಸುಗ್ಗಿಹಬ್ಬ’ ಎಂದು ಕರೆಯಲ್ಪಡುವ, ಸಮಾನತೆ, ಸಂತೋಷ ಮತ್ತು ಐಕ್ಯತೆಗೆ ಪ್ರತೀಕವಾದ ಓಣಂ ಆಚರಣೆಯನ್ನು ಕೊಡಿಯಲ್‌ಬೈಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಉದ್ಘಾಟಿಸಿದರು.
‘ಓಣಂ’ ಆಚರಣೆಯ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳು ವರ್ಣರಂಜಿತ ಪೂಕಳಂ ಅನ್ನು ರಚಿಸಿದರು. ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಬಂದ ಉಪನ್ಯಾಸಕರು ಪೂಕಳಂನ ಸುತ್ತ ತಿರುವಾದಿರ ನೃತ್ಯವನ್ನು ಮಾಡಿದ್ದು, ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಹಾಗೂ ಉಪನ್ಯಾಸಕ ವೃಂದದವರು, ಮತ್ತಿತರರು ಉಪಸ್ಥಿತರಿದ್ದರು.




