ಚಿಟ್ಟೆಮಾರು ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ಉಚಿತ ಕಷಾಯ, ಮೆಂತೆಗಂಜಿ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾಯ೯ಕ್ರಮ
ಸಮ್ಯಕ್ ಕ್ಲಿನಿಕ್‌ನ ಡಾ. ಅನುಷಾ ಅಂಬುಜಾ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಆಯುರ್ವೇದ ಸೇವೆಗಳನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನೀಡಲು ಸಹಕಾರ ಮುಂದುವರಿಸಲಾಗುವುದು ಎಂದರು.
ಆಯುರ್ವೇದ ಪಂಚಕರ್ಮ ಥೆರಪಿಸ್ಟ್ ತಜ್ಞರಾದ ಸೂರ್ಯ ಶೆಟ್ಟಿ ಮಂಗಳೂರು ಮಾತನಾಡಿ, ಆಟಿ ಅಮಾವಾಸ್ಯೆಯಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಆರೋಗ್ಯದ ಕಾಳಜಿಯೂ ಅಡಗಿದೆ. ಇವುಗಳ ಮಹತ್ವವನ್ನು ಇಂದಿನ ಯುವ ಪೀಳಿಗೆಗೂ ತಿಳಿಸುವ ಅಗತ್ಯವಿದೆ ಎಂದರು.
ಪುತ್ತಿಗೆ ಗ್ರಾ.ಪಂ.ನ ಮಾಜಿ ಸದಸ್ಯರಾದ ನಾಗವರ್ಮ ಜೈನ್, ಸಾರಿಕಾ, ಕಳಸಬೈಲು, ಭಜನಾ ತಂಡದ ತರಬೇತುದಾರ ಅಶೋಕ್ ನಾಯ್ಕ್, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯ ಅಧ್ಯಕ್ಷೆ ಪ್ರಮೀಳಾ ನಾಯ್ಕ್, ಕಾರ್ಯದರ್ಶಿ ಆನಂದ್, ಸಂಪಿಗೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶುಭಲತಾ ಜಿ., ಹಾಗೂ ಸಂಪಿಗೆಯ ಸಮುದಾಯ ಆರೋಗ್ಯ ಅಧಿಕಾರಿ, ಆಯುಷ್ಮಾನ್ ಆರೋಗ್ಯ ಕೇಂದ್ರದ ವಿದ್ಯಾ ಮಾಲಗೌಡರ್ ಉಪಸ್ಥಿತರಿದ್ದರು. ಲಕ್ಷ್ಮೀ ಭಟ್ ಹಾಗೂ ವಾಹನ ತರಬೇತಿದಾರರಾದ ರಜನಿ ದೇವಾಡಿಗ ಉಪಸ್ಥಿತರಿದ್ದರು.
ಆಟಿ ಅಮಾವಾಸ್ಯೆಯ ಸಂಪ್ರದಾಯ, ಆಯುರ್ವೇದದ ಮಹತ್ವ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಕಷಾಯ ಹಾಗೂ ಮೆಂತೆಗಂಜಿಯನ್ನು ಉಚಿತವಾಗಿ ವಿತರಿಸಲಾಯಿತು.
