ಸ್ವಾತಂತ್ರ್ಯೋತ್ಸವದದಂದು ತ್ರಿವಣ೯ ಬಣ್ಣಗಳಿಂದ ದೀಪಾಲಂಕಾರಗೊಳ್ಳಲಿದೆ ಮೂಡುಬಿದಿರೆಯ ಸಾವಿರ ಕಂಬದ ಬಸದಿ
ಸಾವಿರ ಕಂಬಗಳ ಬಸದಿ ಸೇರಿದಂತೆ ಇತರ ಬಸದಿಗಳಲ್ಲಿ ಅಳವಡಿಸಿರುವ ದೀಪಾಲಂಕಾರವನ್ನು ಸಾರ್ವಜನಿಕರು ಹಾಗೂ ಮೂಡುಬಿದಿರೆಗೆ ಭೇಟಿ ನೀಡುವವರು ವೀಕ್ಷಿಸುವಂತಾಗಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನೆಯ ಬಳಿಕ ಪ್ರತಿ ಭಾನುವಾರ ಸಂಜೆ 7ರಿಂದ 8ರವರೆಗೆ ದೀಪಾಲಂಕಾರ ಪ್ರದರ್ಶಿಸಲು ಉದ್ದೇಶಿಸಲಾಗಿದೆ.
ಆಗಸ್ಟ್ 15ರ ಕಾರ್ಯಕ್ರಮಕ್ಕೆ ಡಾ. ಮೋಹನ ಆಳ್ವರ ಸಹಕಾರದಲ್ಲಿ ವಯಲಿನ್ ಹಾಗೂ ಕೊಳಲು ವಾದನ ಸೇರಿದಂತೆ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಮೂಡುಬಿದಿರೆಯ ನಾಗರಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೀಪಾಲಂಕಾರ ವೀಕ್ಷಿಸುವಾಗಬೇಕು.
ಮೂಡುಬಿದಿರೆಯ 18 ಬಸದಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪರಂಪರೆಯಿಂದ ಬಂದಿರುವ ಟ್ರಸ್ಟಿಗಳ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ಬಸದಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಬಲಪಡಿಸುವ ಉದ್ದೇಶದಿಂದ ಜೈನ ಕಾಶಿ ಟ್ರಸ್ಟ್ ರಚಿಸಲಾಗಿದೆ. ಟ್ರಸ್ಟ್‌ನಲ್ಲಿ ಪಟ್ಟಣಶೆಟ್ಟ ಸುದೇಶ್ ಕುಮಾರ್, ಸುಧೀಶ್ ಕುಮಾರ್ ಹಾಗೂ ಚೌಟರ ಅರಮನೆ ಆದರ್ಶ್ ಶೇಖರ್ ಸೇರಿದಂತೆ ನಾಲ್ವರು ಟ್ರಸ್ಟಿಗಳಿದ್ದು, ಸ್ವಾಮೀಜಿಯವರು ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ.
ಟ್ರಸ್ಟ್‌ಗೆ ಸಲಹಾ ಸಮಿತಿಯನ್ನೂ ರಚಿಸಲಾಗಿದೆ ಎಂದರು.
ಸಾರ್ವಜನಿಕರಿಗೆ ದೀಪಾಲಂಕಾರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಜಿನಮಂದಿರದ ಪಾವಿತ್ರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಂಡು ದರ್ಶನ ಪಡೆಯುವಂತೆ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ ಮನವಿ ಮಾಡಿದೆ.
ಈ ಹಿಂದೆ ಮಾಜಿ ಸಚಿವರುಗಳಾದ ದಿ. ಕೆ. ಅಮರನಾಥ ಶೆಟ್ಟಿ ಮತ್ತು ಅಭಯಚಂದ್ರ ಜೈನ್ ಅವರು ಸಚಿವರಾಗಿದ್ದ ಸಂದಭ೯ದಲ್ಲಿ ದೀಪಾಲಂಕೃತಗೊಳಿಸಲಾಗಿತ್ತು ಆನಂತರದ ದಿನಗಳಲ್ಲಿ ಕಾರಣಾಂತರದಿಂದ ಸ್ಥಗಿತಗೊಂಡಿತು ಇದೀಗ ಮತ್ತೆ ವಿಶೇಷ ದಿನಗಳ ಸಂದಭ೯ದಲ್ಲಿ ದೀಪಾಲಂಕಾರಗೊಳಿಸುವುದೆಂದು ತೀಮಾ೯ನಿಸಲಾಗಿದೆ ಎಂದು ಸದಸ್ಯ ಕೆ. ಕೃಷ್ಣರಾಜ ಹೆಗ್ಡೆ ತಿಳಿಸಿದರು.
ಜೈನ ಕಾಶಿ ಟ್ರಸ್ಟ್ ಟ್ರಸ್ಟಿಗಳಾದ ಪಟ್ಟಣಶೆಟ್ಟ ಸುದೇಶ್ ಕುಮಾರ್, ಸುಧೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
