'ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ' ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ

'ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ' ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ


ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣೆ ಸಹಯೋಗದಲ್ಲಿ ಕಾನೂನು ಘಟಕ ಮೂಡುಬಿದಿರೆ, ಹಾಗೂ ಟೀಮ್ ಬೆದ್ರದ ವತಿಯಿಂದ ನಡೆದ 'ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ' ಸ್ಟಿಕ್ಕರ್ ಅಭಿಯಾನಕ್ಕೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಶುಕ್ರವಾರ ಕೆ. ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಚಾಲನೆ ನೀಡಿದರು.


ನಂತರ ಮಾತನಾಡಿದ ಅವರು ಹಿಂದೆ ಡ್ರಗ್ಸ್ ಎಂದರೆ ಎಲ್ಲರಿಗೂ ಭಯವಿತ್ತು ಮತ್ತು ಸಿನೆಮಾ, ಸೀರಿಯಲ್ ಗಳಲ್ಲಿ ಮಾತ್ರ ಇವುಗಳ ಬಗ್ಗೆ ನೋಡುತ್ತಿದ್ದೆವು ಆದರೆ ಇಂದಿನ ದಿನಗಳಲ್ಲಿ ಕೇರಳ, ಬೆಂಗಳೂರಿನಲ್ಲಿ ಸಿಗುವ ಗಾಂಜಾ ಸಹಿತ ಇತರ ಮಾದಕ ವಸ್ತುಗಳು ಬ್ರೋಕರ್ ಗಳ ಮೂಲಕ ಶಾಲಾ ಕಾಲೇಜಿನ ಮಕ್ಕಳ ಕೈಗೆ ಸುಲಭವಾಗಿ ಸಿಗುವಂತ್ತಾಗಿದೆ.  ಡ್ರಗ್ಸ್ ಮುಂತಾದ ಮಾದಕ ವಸ್ತುಗಳ ಮಾರಾಟದ ಬಗ್ಗೆ ತಮ್ಮ ಗಮನಕ್ಕೆ ಬಂದರೆ ಪೊಲೀಸರ ಮಾಹಿತಿ ನೀಡುವಂತೆ ಮತ್ತು ಸೈಬರ್ ಕ್ರೈ ಬಗ್ಗೆ ಜಾಗ್ರತೆ ತರುವಂತೆ ತಿಳಿಸಿದರು.

ಕಾರ್ಯಕ್ರಮದ ಆಯೋಜಕರು, ಪದ್ಮಪ್ರಸಾದ್ ವಕೀಲರು, ಪ್ರಸ್ತಾವಿಕವಾಗಿ ಮಾತನಾಡಿ, ದೇಶದ ಭವಿಷ್ಯಕ್ಕೆ ಮಾರಕವಾಗಿರುವ ಡ್ರಗ್ಸ್, ಮತ್ತು ಸೈಬರ್ ಕ್ರೈಮ್ ವಿರುದ್ಧ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಸಕ್ರಿಯವಾಗಿ ಕೈ ಜೋಡಿಸಬೇಕು. ತಾಲೂಕಿನ ಎಲ್ಲಾ ಕಾಲೇಜು, ಹಾಗು ಗ್ರಾಮಗಳಲ್ಲಿ ಸ್ಟಿಕ್ಕರ್ ಅಭಿಯಾನ ನಡೆಸಲಾಗುವುದು ಎಂದರು. 

ಎಸ್ ಎನ್ ಎಂ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಜೆ. ಜೆ. ಪಿಂಟೋ, ಪುರಸಭೆಯ ಮಾಜಿ ಸದಸ್ಯ ಪುರಂದರ ದೇವಾಡಿಗ,ಜಿಲ್ಲಾ ಕೆಡಿಪಿ ಸದಸ್ಯ ಪ್ರವೀಣ್ ಕುಮಾರ್, ದ. ಕ. ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಸುಚರಿತ ಶೆಟ್ಟಿ, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಪ್ರಮುಖರಾದ ಅಲ್ವಿನ್ ಡಿಸೋಜ, ಸಿ. ಹೆಚ್ ಗಪೂರ್,  ಅನೀಶ್ ಡಿಸೋಜ, ಕುಮಾರ್ ಪೂಜಾರಿ, ನವೀನ್ ಟಿ.ಆರ್. ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.

ರಾಜೇಶ್ ಕಡಲೆಕೆರೆ ಕಾರ್ಯಕ್ರಮ ನಿರೂಪಿಸಿದರು. ಕಾನೂನು ಘಟಕದ ಅಧ್ಯಕ್ಷ ಮರ್ವಿನ್ ಲೋಬೊ ವಂದಿಸಿದರು.

ಶ್ರೀ ಮಹಾವೀರ ಕಾಲೇಜು ಮತ್ತು ಶಿತಾ೯ಡಿ ಭುವನಜ್ಯೋತಿಯ ವಿದ್ಯಾಥಿ೯ಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article