ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ಡಾ.ಎಂ ಮೋಹನ ಆಳ್ವ ಅವರಿಗೆ ‘ತುಳುವರ ಕಾಮಧೇನು’ ಎಂಬ ಬಿರುದು
ಡಾ. ಎಂ. ಮೋಹನ ಆಳ್ವ ಮಾತನಾಡಿ, ಆಳ್ವಾಸ್ ಮೆಡಿಕಲ್ ಕಾಲೇಜನ್ನು ಭಾಷಾ ಅಲ್ಪಸಂಖ್ಯಾತ ತುಳು ಭಾಷೆಯ ಆಧಾರದ ಮೇಲೆ ಸ್ಥಾಪಿಸಲು ಪ್ರಯತ್ನಿಸಲಾಗಿದ್ದು, ಕೊನೆಗೂ ಅದಕ್ಕೆ ಅನುಮತಿ ದೊರೆತಿದೆ. ಮೆಡಿಕಲ್ ಕಾಲೇಜನ್ನು ತುಳು ಭಾಷಾ ಅಲ್ಪಸಂಖ್ಯಾತ ಕೋಟಾದಡಿ ನೋಂದಾಯಿಸಿದ ಸಂತೋಷಕ್ಕಾಗಿ ಅಖಿಲ ಭಾರತ ತುಳು ಒಕ್ಕೂಟದ ಪದಾಧಿಕಾರಿಗಳು ಬಂದು ಗೌರವಿಸಿರುವುದು ತಮಗೆ ಅಪಾರ ಸಂತೋಷ ತಂದಿದೆ.
ತಾನು ತುಳುವನಾಗಿದ್ದು, ತುಳು ತನ್ನ ಮಾತೃಭಾಷೆ. ತುಳು ಮತ್ತು ತುಳುನಾಡಿನ ಭಾಷೆಯ ಬಗ್ಗೆ ಅಪಾರ ಗೌರವವಿದೆ. ಮೆಡಿಕಲ್ ಕಾಲೇಜು ಆರಂಭಿಸುವ ಸಂದರ್ಭದಲ್ಲಿ ಭಾಷಾ ಅಲ್ಪಸಂಖ್ಯಾತ ಅಡಿಯಲ್ಲಿ ನೋಂದಾಯಿಸಲು ಅವಕಾಶವಿದ್ದಾಗ, ಇದು ಲಾಭ-ನಷ್ಟದ ಪ್ರಶ್ನೆಯನ್ನು ನೋಡಿಲ್ಲ.ಪ್ರಪಂಚದಾದ್ಯಂತ ಇರುವ ತುಳುವರಲ್ಲಿ ಯಾರಿಗಾದರೂ ವೈದ್ಯಕೀಯ ಶಿಕ್ಷಣ, ಅದರಲ್ಲೂ ಎಂಬಿಬಿಎಸ್ ಕಲಿಯಲು ಅವಕಾಶ ಸಿಗುವಂತೆ ಮಾಡುವುದು ತನ್ನ ಕರ್ತವ್ಯ ಎಂಬ ಉದ್ದೇಶದಿಂದ ಕಾಲೇಜನ್ನು ಭಾಷಾ ಅಲ್ಪಸಂಖ್ಯಾತ ಕೋಟಾದಡಿ ಮಾಡಲಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ಪ್ರಧಾನ ಕಾರ್ಯದರ್ಶಿ ಪಿ. ಎ. ಪೂಜಾರಿ, ಕೋಶಾಧಿಕಾರಿ ವಿಜಯಲಕ್ಷ್ಮಿ ಬಿ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ಮೂಡುಬಿದಿರೆ ತುಳುಕೂಟದ ಅಧ್ಯಕ್ಷೆ ಜಯಂತಿ ಎಸ್. ಬಂಗೇರ, ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಕಾರ್ಯದರ್ಶಿ ಚೇತನಾ ರಾಜೇಂದ್ರ ಹೆಗ್ಡೆ, ಉಪಾಧ್ಯಕ್ಷೆ ಶ್ವೇತಾ ಜೈನ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ವೇಣುಗೋಪಾಲ್ ಶೆಟ್ಟಿ, ಸದಾನಂದ ನಾರಾವಿ, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ, ಉಡುಪಿ ತುಳುಕೂಟದ ಅಧ್ಯಕ್ಷ ಗಂಗಾಧರ ಕಿದಿಯೂರು, ಭುವನ ಪ್ರಸಾದ್, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ತಾರಾನಾಥ ಶೆಟ್ಟಿ ಬೋಳಾರ, ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು ಉಪಸ್ಥಿತರಿದ್ದರು.