ಅನಾರೋಗ್ಯ: ಮಾರೂರು ಗುಡ್ಡಲಂಗಡಿ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯಿಂದ ಆಥಿ೯ಕ ನೆರವು

ಅನಾರೋಗ್ಯ: ಮಾರೂರು ಗುಡ್ಡಲಂಗಡಿ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯಿಂದ ಆಥಿ೯ಕ ನೆರವು


ಮೂಡುಬಿದಿರೆ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಾರೂರು ನಿವಾಸಿ ನವೀನ್ ಶೆಟ್ಟಿಗೆ ಮಾರೂರು ಗುಡ್ಡಲಂಗಡಿ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯ ವತಿಯಿಂದ  ಆರ್ಥಿಕ ಸಹಾಯವನ್ನು ನೀಡಲಾಯಿತು.

ಸಮಾಜಮುಖಿ ಕಾರ್ಯಗಳ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಸಮಿತಿಯು ಈ ಸಹಾಯಧನವನ್ನು ವಿತರಿಸಿತು. ಸಮಿತಿಯ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಅವರ ನೇತೃತ್ವದಲ್ಲಿ ನೆರವು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸುಶಾಂತ್ ಕರ್ಕೇರಾ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ಸುಶಾಂತ್ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article