ಮೂಡುಬಿದಿರೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಸಂಗ್ರಹ ಪೂರ್ಣ

ಮೂಡುಬಿದಿರೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಸಂಗ್ರಹ ಪೂರ್ಣ

ಮೂಡುಬಿದಿರೆ: 201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದ ಪ್ರಗತಿ ಕುರಿತು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಮಂಗಳವಾರ ಪ್ರಗತಿ ಪ್ರಕಟಣೆ ಹೊರಡಿಸಿದೆ.

ಪ್ರಕಟಣೆಯ ಪ್ರಕಾರ, 2026ರ ಜೂನ್ 30ರಿಂದ ಆಗಸ್ಟ್ 8ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಂದ ಸಂಗ್ರಹಿಸಿದ ಏನುಮೇರಷನ್ ಫಾರಂಗಳ ಸಂಖ್ಯೆ 2,08,981 ಆಗಿದ್ದು, ಶೇ.100ರಷ್ಟು ನಮೂನೆಗಳ ಸಂಗ್ರಹಣೆ ಪೂರ್ಣಗೊಂಡಿದೆ.

ಸಂಗ್ರಹಿಸಲಾದ ನಮೂನೆಗಳಲ್ಲಿ 1,93,279 ಏನುಮೇರಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ಶೇ.92.49ರಷ್ಟಾಗಿದೆ. ಉಳಿದ 15,702 ಪ್ರಕರಣಗಳು ASDD (UEF) ವಿಭಾಗದಲ್ಲಿ ದಾಖಲಾಗಿವೆ.

ಯುಇಎಫ್ ಪ್ರಕರಣಗಳಲ್ಲಿ 1,337 ಮತದಾರರು ಪತ್ತೆಯಾಗದವರು ಅಥವಾ ಗೈರುಹಾಜರಾಗಿರುವವರಾಗಿದ್ದು, 7,583 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ದಾಖಲಾಗಿದೆ. 4,967 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿರುವ 1,694 ಪ್ರಕರಣಗಳು ಪತ್ತೆಯಾಗಿದ್ದು, ಇತರೆ 121 ಪ್ರಕರಣಗಳು ದಾಖಲಾಗಿವೆ.

201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 219 ಮತಗಟ್ಟೆಗಳಿದ್ದು, ಒಟ್ಟು ಮತದಾರರ ಸಂಖ್ಯೆ 2,08,981 ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article