ಜಡಿ ಕೂಟ ಮಳೆ: ಕೈಕಂಬ-ಚೇರು ಬಳಿ ರಸ್ತೆಯ ಮೇಲೆ ನೀರು, ಸಂಚಾರ ಅಸ್ತವ್ಯಸ್ತ

ಜಡಿ ಕೂಟ ಮಳೆ: ಕೈಕಂಬ-ಚೇರು ಬಳಿ ರಸ್ತೆಯ ಮೇಲೆ ನೀರು, ಸಂಚಾರ ಅಸ್ತವ್ಯಸ್ತ


ಸುಬ್ರಮಣ್ಯ: ಪಶ್ಚಿಮ ಘಟ್ಟದ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸಣ್ಣಪುಟ್ಟ ತೋಡು ಹಳ್ಳಗಳು ಕೂಡ ತುಂಬಿ ಹರಿಯುತ್ತಿದೆ. 


ಬಿಳಿನೆಲೆ-ಕೈಕಂಬ ಬಳಿಯ ಚೇರು ಎಂಬಲ್ಲಿ ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಒಮ್ಮೆಗೆ ನೀರು ಅಧಿಕವಾಗಿ ಬಂದು ಸುಬ್ರಹ್ಮಣ್ಯ-ಗುಂಡ್ಯ-ಧರ್ಮಸ್ಥಳ ಹೆದ್ದಾರಿಯನ್ನೇ ಬ್ಲಾಕ್ ಮಾಡಿ ಸಂಚಾರ ಹಸ್ತ ವ್ಯಸ್ತ ಗೊಳಿಸಿದೆ. 


ಮಳೆ ನಿರಂತರವಾಗಿದ್ದ ಕಾರಣ ನೀರು ಒಮ್ಮೆಲೆ ಏರಿಕೆಯಾಗಿರುವುದೇ ಇದಕ್ಕೆ ಕಾರಣ. ಇದರಿಂದಾಗಿ ವಾಹನಗಳು ಎರಡು ಬದಿಗಳಲ್ಲಿ ಸಾಲುಗಟ್ಟಲೆ ನಿಂತು ಕಾಯಬೇಕಾಯಿತು. ಮಳೆ ನೀರು ಕಡಿಮೆಯಾದ ನಂತರ ಅತ್ತಕಡೆ ವಾಹನಗಳು ಇತ್ತ ಕಡೆಗೆ ಇತ್ತಕಡೆ ವಾಹನಗಳು ಅತ್ತ ಕಡೆಗೆ ಚಲಿಸಿದರೊಂದಿಗೆ ಸಂಚಾರ ಮುಕ್ತವಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article