ಸುಳ್ಯ ನಗರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿ: ಜಿಲ್ಲಾಧಿಕಾರಿಯವರಿಗೆ ಮನವಿ

ಸುಳ್ಯ ನಗರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿ: ಜಿಲ್ಲಾಧಿಕಾರಿಯವರಿಗೆ ಮನವಿ


ಸುಳ್ಯ: ಸುಳ್ಯ ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ದ.ಕ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರಿಗೆ ನಗರ ಕಾಂಗ್ರೆಸ್ ಮನವಿ ಮಾಡಿದೆ.

ಸುಳ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಶಶಿಧರ್ ಅವರ ನೇತೃತ್ವದ ನಿಯೋಗ ಭೇಟಿ ಮಾಡಿ ಸುಳ್ಯ ನಗರದ ಪ್ರಮುಖ ಸಮಸ್ಯೆ ಗಳಾದ ಕಸ ವಿಲೇವಾರಿಯ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದರು. ನಗರ ಪಂಚಾಯತ್ ಆವರಣದಲ್ಲಿ ಮತ್ತೆ ಡಂಪಿಂಗ್ ಯಾರ್ಡ್ ಆಗಿದೆ, ಅಮೃತ್ 2.0 ಯೋಜನೆಗಾಗಿ ಅಗೆದ ರಸ್ತೆ ಇನ್ನೂ ನಾದುರಸ್ತಿಯಲ್ಲಿದ್ದು ಮುಖ್ಯ ರಸ್ತೆಯಲ್ಲಿ ಜನ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರ ದುರಸ್ಥಿಗೆ ಆದೇಶ ನೀಡಬೇಕು, 8 ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನ ನೀಡಿಲ್ಲ, ನಗರ ಆಶ್ರಯ ಸಮಿತಿ ಸಭೆ ಕರೆಯಲು ಮೀನ ಮೇಷ ಎನಿಸುತ್ತಿದ್ದಾರೆ, ನಗರ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುತ್ತಾ ಬಂದರೂ ರಸ್ತೆ, ಚರಂಡಿ ದುರಸ್ತಿ ಕಾರ್ಯ ಮಾಡದೆ ನೀರು ರಸ್ತೆಯಲ್ಲೇ ಹರಿದು ಸಣ್ಣ ಮಳೆ ಬಂದರೂ ಜನರ ಜನ ಜೀವನ ಅಸ್ತವ್ಯಸ್ತ ವಾಗುತ್ತಿದೆ. ಇದನ್ನು ಸರಿಪಡಿಸಲು ಕೂಡಲೇ ಆದೇಶ ನೀಡಿ ಎಂದು ವಿನಂತಿಸಲಾಯಿತು.

ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ, ಅಚ್ಚುತ ಮೆಲ್ಕಜೆ, ನಂದರಾಜ ಸಂಕೇಶ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article