ತುಳುನಾಡ ಸಂಸ್ಕೃತಿಯನ್ನು ರಾಜ್ಯಾದ್ಯಂತ ಪಸರಿಸುವ ಕಾರ್ಯ ಯೋಜನೆಯಿಂದ ಮಾಡಲಾಗುತ್ತಿದೆ: ಅನಿಲ್ ಕುಮಾರ್ ಎಸ್.ಎಸ್.

ತುಳುನಾಡ ಸಂಸ್ಕೃತಿಯನ್ನು ರಾಜ್ಯಾದ್ಯಂತ ಪಸರಿಸುವ ಕಾರ್ಯ ಯೋಜನೆಯಿಂದ ಮಾಡಲಾಗುತ್ತಿದೆ: ಅನಿಲ್ ಕುಮಾರ್ ಎಸ್.ಎಸ್.


ಉಜಿರೆ: 44 ಸಾವಿರ ಕಾರ್ಯಕರ್ತರು ತುಳುನಾಡ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ರಾಜ್ಯಾದ್ಯಂತ ತಿಳಿಸುವ ಕಾರ್ಯಮಾಡಲಾಗುತ್ತಿದೆ ಎಂದು ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.

ಅವರು ಆ.23 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ, ಪ್ರಗತಿ ಬಂಧು ಒಕ್ಕೂಟ ಬೆಳ್ತಂಗಡಿ, ಗುರುವಾಯನಕೆರೆ ಇದರ ಸಂಯುಕ್ತ ಆಶ್ರಯದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜೈನ್ ಪೇಟೆ ದೊಡ್ಡಮನೆ ಗದ್ದೆಯಲ್ಲಿ ನಡೆದ ‘ಕೆಸರ್ ದ ಕಂಡೊಡೊಂಜಿ ದಿನ’ ಕಾರ್ಯಕ್ರಮದ ವಿವಿಧ ಸ್ಫರ್ದೆಗಳಿಗೆ ಚಾಲನೆ ನೀಡಿ ಮಾತನಾಡಿದರು.  

ಗ್ರಾಮೀಣ ಪ್ರದೇಶದಲ್ಲಿ ಮುಳಿಹುಲ್ಲಿನ ಮನೆಯಿದ್ದ ಕಾಲದಲ್ಲಿ ಧ.ಗ್ರಾ. ಯೋಜನೆ ಪ್ರಾರಂಭವಾಗಿ ಇಂದು ಅದೇ ಮನೆಯಲ್ಲಿ ದುಬಾರಿ  ಬೆಲೆಯ ಕಾರು ಬಂದು ನಿಂತಿದೆ. ಇದಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ ಹೆಗ್ಗಡೆಯವರ ದೂರದೃಷ್ಟಿಯ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಯೇ ಕಾರಣವಾಗಿದೆ. ಕ್ಷೇತ್ರದ ಯೋಜನೆಯ ಆರ್ಥಿಕ ಭದ್ರತೆ, ಶಿಕ್ಷಣ, ಅರೋಗ್ಯ, ಕೃಷಿ ಇನ್ನಿತರ ಸೌಲಭ್ಯಗಳನ್ನು ರಾಜ್ಯಾದ್ಯಂತ ಸುಮಾರು ಎರಡು ಕೋಟಿಗೂ ಅಧಿಕ ಮಂದಿ ಪ್ರಯೋಜನ ಪಡೆಯತ್ತಿದ್ದಾರೆ ಎಂದರು.

ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಮಾತನಾಡಿ, ರಜಾದಿನಗಳಲ್ಲಿ ಬಹುತೇಕ ಮಂದಿ ಪೇಟೆಯ ಮಾಲ್, ಪಟ್ಟಣಗಳಿಗೆ ತಿರುಗಾಟ ಹೊಗುವವರೇ  ಹೆಚ್ಚು. ಆದರೆ ಗ್ರಾಮೀಣ ಭಾಗದಲ್ಲಿ ಇಂತಹ ಜಾನಪದ ಕ್ರೀಡೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅರೋಗ್ಯಕ್ಕೂ ಒಳ್ಳೆಯದು, ಮಾನಸಿಕ ನೆಮ್ಮದಿಯೂ  ಸಿಗಬಹುದು ಎಂದರು. 

ಕೇಂದ್ರ ಒಕ್ಕೂಟದ ಅದ್ಯಕ್ಷ ಸೀತಾರಾಮ್ ಆರ್. ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್, ಬೆಳ್ತಂಗಡಿ ಭಜನಾ ಪರಿಷತ್ ಅದ್ಯಕ್ಷ ರವೀಂದ್ರ, ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ದೊಡ್ಡಮನೆ, ರತ್ನಮಾನಸ ಜೀವನ ಶಿಕ್ಷಣ ಕೇಂದ್ರದ ಮೇಲ್ವಿಚಾರಕ ಯತೀಶ್, ಜಯಲಕ್ಷ್ಮಿ ದೊಡ್ಡಮನೆ, ವಿವಿಧ ವಲಯದ ಒಕ್ಕೂಟದ ಅಧ್ಯಕ್ಷರು, ಸೇವಾನಿರತರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು. 

ನಿರ್ದೇಶಕ ದಿನೇಶ್ ಸ್ವಾಗತಿಸಿ, ಯೊಜನಾದಿಕಾರಿ ಯಶೋಧರ ವಂದಿಸಿದರು. ಕೃಷಿ ವಿಭಾಗದ ಯೋಜನಾದಿಕಾರಿ ರಾಮ್ ಕುಮಾರ್, ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳು ಹಾಗೂ ಜಾನಪದ ಕ್ರೀಡೆಗಳನ್ನು ಅಯೋಜಿಸಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article