ವಿದ್ಯೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ: ಡಾ. ಪ್ರದೀಪ್ ಆಟಿಕುಕ್ಕೆ
ಹಿರಿಯ ವಿದ್ಯಾರ್ಥಿಗಳ ಸನ್ಮಾನ:
ವೈದ್ಯರುಗಳಾಗಿ ವಿವಿಧ ಊರುಗಳಲ್ಲಿ ಸೇವೆ ಮಾಡುತ್ತಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಡಾ. ಪ್ರಕಾಶ್, ಉಜಿರೆ, ಡಾ. ರಾಜಾರಾಮ, ಉಪ್ಪಿನಂಗಡಿ, ಡಾ. ಎಂ.ಎಂ. ದಯಾಕರ, ಡಾ. ಸದಾನಂದ ಪೂಜಾರಿ, ಮಂಗಳೂರು, ಡಾ. ಶ್ರೀಹರಿ, ಗುರುವಾಯನಕೆರೆ, ಡಾ. ಪ್ರದೀಪ್ ಆಟಿಕುಕ್ಕೆ, ನಾವೂರು, ಡಾ. ಶಶಿಕಾಂತ್ ಡೋಂಗ್ರೆ, ಬೆಳ್ತಂಗಡಿ, ಡಾ. ರಂಜನ್ ಕುಮಾರ್, ಉಜಿರೆ, ಡಾ, ರೇಷ್ಮಾ, ಮೂಡಬಿದ್ರೆ ಮತ್ತು ಡಾ. ಶ್ರೀಹರ್ಷ, ಉಜಿರೆ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಇಪ್ಪತ್ತು ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ.ನಂತೆ ಒಂದು ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು.
ಮಧ್ಯಾಹ್ನ ಭೋಜನ ವ್ಯವಸ್ಥೆಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ದೇಣಿಗೆ ನೀಡಿದರು.
ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಸ್ವಾಗತಿಸಿದರು. ವಕೀಲ ಬಿ.ಕೆ. ಧನಂಜಯ ರಾವ್ ವಂದಿಸಿ, ಉಪನ್ಯಾಸಕರುಗಳಾದ ದಿವಾ ಕೊಕ್ಕಡ ಮತ್ತು ದೀಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.


