ಕೋಟ ದೇವಳದಲ್ಲಿ ಮಾಂಗಲ್ಯ ಸರ ಕಳವು

ಕೋಟ ದೇವಳದಲ್ಲಿ ಮಾಂಗಲ್ಯ ಸರ ಕಳವು


ಕುಂದಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದಲ್ಲಿ ಚೌತಿ ಹಬ್ಬದ ಗದ್ದಲದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ. 

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಭಕ್ತರ ತೀವ್ರ ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ  ಮಹಿಳೆಯರ ಗುಂಪು ಈ ಕೃತ್ಯ ಎಸಗಿದೆ.

ದೇವಳದ ಗರ್ಭಗುಡಿಯ ಪಕ್ಕದಲ್ಲಿ ಭಕ್ತರು ತೀರ್ಥ ಸ್ವೀಕರಿಸುತ್ತಿದ್ದ ವೇಳೆ ಮೂವರು ಕಿಲಾಡಿ ಕಳ್ಳಿಯರು ಕರಾರುವಾಕ್ಕಾಗಿ ಮಾಂಗಲ್ಯ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ.

ಈ ಕಳ್ಳತನದ ರೋಚಕ ದೃಶ್ಯಗಳು ದೇವಸ್ಥಾನದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article