ಸ್ಥಿತಿಸ್ಥಾಪಕತ್ವ ಬೆಳೆಸಿಕೊಳ್ಳಲು ಕರೆ: ಅಜಯ್ ಕುಮಾರ್ ಚೌಧರಿ
Saturday, September 12, 2026
ಮಂಗಳೂರು: "ಮುಂದಿನ ಪೀಳಿಗೆಯ ಹಣಕಾಸು ಮೂಲಸೌಕರ್ಯವು ಭವಿಷ್ಯದ ಅಪಾಯಗಳನ್ನು ಎದುರಿಸುವಷ್ಟು ಸ್ಥಿತಿಸ್ಥಾಪಕತ್ವ ಹೊಂದಿರಬೇಕು ಎಂದು ನ್ಯಾಷನಲ್ ಪೇಮೆಂಟ್ಸ್ ಕಾಪೆರ್ರೇಷನ್ ಆಫ್ ಇಂಡಿಯಾ (ಎನ್ಪಿಸಿಐ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಹಾಗೂ ಸ್ವತಂತ್ರ ನಿರ್ದೇಶಕ ಅಜಯ್ ಕುಮಾರ್ ಚೌಧರಿ ಹೇಳಿದರು.
ಈ ಹಣಕಾಸು ಮೂಲಸೌಕರ್ಯ ನೈಜ ಉದ್ದೇಶವನ್ನು ಅರ್ಥಮಾಡಿಕೊಳ್ಳುವಷ್ಟು ಜಾಣ್ಮೆ ಹೊಂದಿರಬೇಕು; ಮೌಲ್ಯವನ್ನು ಸಮನ್ವಯಗೊಳಿಸುವಷ್ಟು ಕಾರ್ಯಸಾಧುವಾಗಿರಬೇಕು. ಪ್ರತಿಯೊಬ್ಬ ನಾಗರಿಕನಿಗೂ ಸೇವೆ ಒದಗಿಸುವಂತಾಗಬೇಕು ಎಂದು 7ನೇ ಗ್ಲೋಬಲ್ ಫಿನ್ಟೆಕ್ ಫೆಸ್ಟ್ನಲ್ಲಿ ಅಭಿಪ್ರಾಯಪಟ್ಟರು.
ಹಣಕಾಸು ವ್ಯವಸ್ಥೆಯು ಈಗ ಹೊಸ ಹಂತವನ್ನು ಪ್ರವೇಶಿಸುತ್ತಿದ್ದು, ಇಲ್ಲಿ ವ್ಯವಸ್ಥೆಗಳು ಹೆಚ್ಚು ಬುದ್ಧಿವಂತವಾಗುತ್ತಿವೆ, ಆಸ್ತಿಗಳು ಮತ್ತು ವಹಿವಾಟುಗಳು ಹೆಚ್ಚು ಕಾರ್ಯಸಾಧು ಆಗುತ್ತಿವೆ ಹಾಗೂ ಡಿಜಿಟಲ್ ವಿಶ್ವಾಸದ ಪರಿಕಲ್ಪನೆಯೇ ಮರುರೂಪಗೊಳ್ಳುತ್ತಿದೆ ಎಂದು ಹೇಳಿದ್ದಾರೆ.