ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಅಂಗದಾನ

ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಅಂಗದಾನ


ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು ಮೆದುಳು ಮರಣ ಘೋಷಣೆಯ ನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿಸ್ವಾರ್ಥ ನಿರ್ಧಾರ ಕೈಗೊಂಡ ಉಳ್ಳಾಲದ ಕೋಟೇಕಾರ್‌ನ ನಿವಾಸಿ ಪ್ರಕಾಶ್ ಆಚಾರ್ಯ (50) ಅವರ ದೇಹವನ್ನು ತುಟುಂಬದವರು ಹಸ್ತಾಂತರ ಮಾಡಿದ್ದಾರೆ.

ಪ್ರಕಾಶ್ ಆಚಾರ್ಯ ಅವರು ಸೆ.14 ರಂದು ತಮ್ಮ ಮನೆಯ ಮುಂದೆ ಬಿದ್ದು ಮೆದುಳಿಗೆ ಗಾಯಗೊಂಡರು. ಅವರನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳು ನಿಷ್ಕ್ರಿಯ ಸಮಿತಿಯು ಸಂಪೂರ್ಣ ಪರಿಶೀಲನೆ ನಡೆಸಿ, ನಿಗದಿತ ಮೆದುಳು ಮರಣ ಮೌಲ್ಯಮಾಪನವನ್ನು ಪೂರ್ಣಗೊಳಿಸಿದ ನಂತರ, ಅವರನ್ನು ಸೆ.17 ರಂದು ಮೆದುಳು ನಿಷ್ಕ್ರಿಯ ಹೊಂದಿರುವುದಾಗಿ ಘೋಷಿಸಲಾಯಿತು.

ಸೆ.19 ರಂದು ಮೃತರ ಕುಟುಂಬದ ಧೈರ್ಯಶಾಲಿ ನಿರ್ಧಾರವು ಹಲವಾರು ರೋಗಿಗಳಿಗೆ ಹೊಸ ಆಶಾಕಿರಣ ನೀಡಿದೆ. ಕೆಎಂಸಿ ಮಣಿಪಾಲ್ ತಂಡವು ಎರಡು ಮೂತ್ರಪಿಂಡಗಳನ್ನು ಸಂಗ್ರಹಿಸಿದ್ದು, ಅವು ಡಯಾಲಿಸಿಸ್ ಪಡೆಯುತ್ತಿರುವ ಇಬ್ಬರು ರೋಗಿಗಳಿಗೆ ಪ್ರಯೋಜನವಾಗಲಿವೆ. ಕೆಎಂಸಿ ಅತ್ತಾವರ ತಂಡವು ಎರಡು ಕಣ್ಣಿನ ಕಾರ್ನಿಯಾಗಳನ್ನು ಸಂಗ್ರಹಿಸಿದ್ದು, ಇದರಿಂದ ಇಬ್ಬರಿಗೆ ದೃಷ್ಟಿ ಮರಳುವ ಸಾಧ್ಯತೆ ಇದೆ.

ಒಂದು ಜೀವವು ಅನೇಕರು ಉತ್ತಮವಾಗಿ ಬದುಕಲು ಅವಕಾಶವಾಗಿ ಪರಿಣಮಿಸಿದೆ. ಈ ಮಹಾನ್ ದಾನಿಗೆ ನಮ್ಮ ಆಳವಾದ ಗೌರವವನ್ನು ಸಲ್ಲಿಸುತ್ತೇವೆ ಮತ್ತು ಈ ಶ್ರೇಷ್ಠ ನಿರ್ಧಾರ ಕೈಗೊಂಡ ಅವರ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article