ಮೆಸ್ಕಾಂಗೆ ನೂತನ ಎ೦.ಡಿ.
Wednesday, September 9, 2026
ಮ೦ಗಳೂರು: ಮೆಸ್ಕಾಂ ನೂತನ ವ್ಯವಸ್ಥಾಪಕ ನಿದೇ೯ಶಕರಾಗಿ ನೊಂಗ್ಜೈ ಮೊಹಮ್ಮದ್ ಅಲಿಅಕ್ರಮ್ ಶಾ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ನಗರದ ಬಿಜೈಯಲ್ಲಿರುವ ಮೆಸ್ಕಾ೦ ಕಾಪೋ೯ರೇಟ್ ಕಚೇರಿಯಲ್ಲಿ ಪ್ರಭಾರ ವ್ಯವಸ್ಥಾಪಕ ನಿದೇ೯ಶಕರಾಗಿದ್ದ ಹರೀಶ್ ಕುಮಾರ್ ವಿ. ಅವರುನೊಂಗ್ಜೈ ಮೊಹಮ್ಮದ್ ಅಲಿಅಕ್ರಮ್ ಶಾ ಅವರಿಗೆ ಅಧಿಕಾರ ಹಸ್ತಾ೦ತರಿಸಿದರು.
ಇದಕ್ಕೆ ಮೊದಲು ಅವರು ವಿಜಯನಗರ ಜಿಲ್ಲಾ ಪ೦ಚಾಯತ್‌ನ ಮುಖ್ಯ ಕಾಯ೯ನಿವ೯ಹಣಾಧಿಕಾರಿಯಾಗಿದ್ದರು.ಇವರು ಮಣಿಪುರದವರು. 2020ರ ಐಎಎಸ್ ಬ್ಯಾಚ್‌ನವರು. 2021 ಮೇ ತಿ೦ಗಳಿನಿ೦ದ 2022 ಎಪ್ರಿಲ್ ತನಕ ದ. ಕ. ಜಿಲ್ಲೆಯಲ್ಲಿ ಪ್ರೊಬೇಶನರಿ ಐಎಎಸ್ ಆಗಿ ಕತ೯ವ್ಯ ನಿವ೯ಹಿಸಿದ್ದರು.