ಮೈ ಭಾರತ್’ ಪೋರ್ಟಲ್ನಲ್ಲಿ ಆನ್ಲೈನ್ ರಸಪ್ರಶ್ನೆ: ಆಹ್ವಾನ
ಮಂಗಳೂರು: ವಿಕಸಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ ವತಿಯಿಂದ ‘ಮೈ ಭಾರತ್’ ಪೋರ್ಟಲ್ನಲ್ಲಿ ಜಿಲ್ಲಾ ಮಟ್ಟದ ಆನ್ಲೈನ್ ರಸಪ್ರಶ್ನೆ ಅಭಿಯಾನ ಆಯೋಜಿಸಲಾಗಿದ್ದು, ಯುವಜನರಿಗೆ ಆಹ್ವಾನ ನೀಡಲಾಗಿದೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಉಲ್ಲಾಸ್, 15ರಿಂದ 29 ವರ್ಷ ವಯಸ್ಸಿನವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ಎಂದರು.
ದ.ಕ. ಜಿಲ್ಲೆಯ ಪ್ರತಿಯೊಬ್ಬ ಯುವಕರಿಗೂ ಅವಕಾಶ ಸಿಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಉದ್ಯೋಗ ನಿರತ ಯುವಕರು, ಯುವಕ ಮಂಡಳಿಗಳು ಹಾಗೂ ಎಲ್ಲಾ ಸಮುದಾಯ ಸಂಘಟನೆಗಳು ಮೈ ಭಾರತ್ ಪೋರ್ಟಲ್ನಲ್ಲಿ ಲೈವ್ ಇರುವ ಹಂತ 1ರ ಆನ್ಲೈನ್ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು. ವಿಕಸಿತ್ ಭಾರತ್ ಚಾಲೆಂಜ್ ಟ್ರ್ಯಾಕ್, ಸಾಂಸ್ಕೃತಿಕ ಟ್ರ್ಯಾಕ್, ಭಾರತಕ್ಕಾಗಿ ನಾವೀನ್ಯತೆ ಟ್ರಯಾಕ್, ಭಾರತಕ್ಕಾಗಿ ವಿನ್ಯಾಸ ಟ್ರ್ಯಾಕ್, ಸಾಮಾಜಿಕ ಕಾಳಜಿಗಾಗಿ ಹ್ಯಾಕ್ ಟ್ರ್ಯಾಕ್, ಯುವ ಉದ್ಯಮಿಗಳ ಸುವಾಲು, ಯುವ ಸಂಸತ್ತು ಕ್ಷೇತ್ರದಲ್ಲಿ ತಳ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ವೇದಿಕೆ ಒದಗಿಸಲಿದೆ. ಭಾಗವಹಿಸುವವರು 3 ಹಂತದ ಅರ್ಹತಾ ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ಸಾಗಲಿದ್ದಾರೆ. ಬಹುಭಾಷೆಗಳಲ್ಲಿ ಈ ಆನ್ಲೈನ್ ರಸಪ್ರಶ್ನೆ ಅಭಿಯಾನ ನಡೆಯಲಿದೆ.
ಹಂತ 1ರಲ್ಲಿ ಹೆಚ್ಚು ಅಂಕ ಗಳಿಸಿದವರು ಪ್ರಮುಖ ವಲಯದ ವಿಷಯಗಳ ಕುರಿತು 500 ಪದಗಳ ಪ್ರಬಂಧ ಸಲ್ಲಿಸಬೇಕು. ಪ್ರತಿ ಜಿಲ್ಲೆಯಿಂದ ಆಯ್ಕೆಯಾಗುವ ಅಗ್ರ 50 ಪ್ರಬಂಧ ಲೇಖಕರು ಜಿಲ್ಲಾ ಮಟ್ಟದ ತಜ್ಞರ ಸಮಿತಿ ಮುಂದೆ ತಮ್ಮ ವಿಚಾರ ಮಂಡಿಸಲಿದ್ದಾರೆ. ದ.ಕ. ಜಿಲ್ಲೆಯಿದ ಆಯ್ಕೆಯಾಗುವ ಇಬ್ಬರು ಸ್ಪರ್ಧಿಗಳು ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆಯಲಿದ್ದು, ಪ್ರಾದೇಶಿಕ ವಿಜೇತರು ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ, ಕೇಂದ್ರಸಚಿವರು ಮತ್ತು ಕಾರ್ಯದರ್ಶಗಳ ಮುಂದೆ ತಮ್ಮ ವಿಚಾರ ಂಡಿಸುವ ಅವಕಾಶ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.
ದ.ಕ. ಜಿಲ್ಲೆಯಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುತ್ತಿರುವ 15ರಿದ 29 ವರ್ಷ ವಯಸ್ಸಿನವರು kyaha?lap.dlv.fÕ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ?RD?UÀOF 2027 ಕ್ಠಿಜ್ಗೆ ಗೆ ಭೇಟಿ ನೀಡಿ ಆದ್ಯತೆಯ ಭಾಷೆಯೊಂದಿಗೆ ಹಂತ 1ರ ಆನ್ಲೈನ್ ರಸಪ್ರಶ್ನೆಯನ್ನು ಪೂರ್ಣಗೊಳಿಸಬೇಕು ಎಂದು ಅವರು ವಿವರಿಸಿದರು.
ಸೀಮಾ, ಜಗದೀಶ್ ಶೇಣವ ಉಪಸ್ಥಿತರಿದ್ದರು.