ಮಂಗಳೂರು ಘಟಕ್ಕೆ ಬರುವಾಗ ತವರುಮನೆಗೆ ಬಂದ ಅನುಭವ: ಜೀವನ್ ಕೊಲ್ಯ

ಮಂಗಳೂರು ಘಟಕ್ಕೆ ಬರುವಾಗ ತವರುಮನೆಗೆ ಬಂದ ಅನುಭವ: ಜೀವನ್ ಕೊಲ್ಯ


ಮಂಗಳೂರು: ಮಂಗಳೂರು ಘಟಕಕ್ಕೆ ಬಂದಾಗ ನನಗೆ ತವರು ಮನೆಗೆ ಬಂದ ಅನುಭವವಾಗುತ್ತಿದೆ. ಇಂದಿನ ದಿನಗಳಲ್ಲಿ ಯುವಕರಿಗೆ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಉಪಯುಕ್ತ ಗೊಳಿಸುವಂತಹ ಹಲವಾರು ಅವಕಾಶಗಳು ಸಿಗುತ್ತವೆ. ಅದರಲ್ಲಿಯೂ ಬೇರೆ ಬೇರೆ ಸಂಘ ಸಂಸ್ಥೆಗಳಿಗೆ ಹೋಲಿಸಿದರೆ ಯುವವಾಹಿನಿ ಸಂಸ್ಥೆಯು ಯುವಕರಿಗಾಗಿ ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡುತ್ತದೆ ಎಂದು ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಹೇಳಿದರು.


ಸೆ.16 ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಉಪನ್ಯಾಸ ನೀಡಿ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸುವಾಗ ಉಪನ್ಯಾಸದೊಂದಿಗೆ ಪರಸ್ಪರ ಸಂಭಾಷಣೆಯಿಂದ ಒಬ್ಬ ವ್ಯಕ್ತಿಯ ಒಳಗೆ ಅಡಗಿರುವ ಕಂಠ, ಪ್ರತಿಭೆಯನ್ನು ಗುರುತಿಸಲು ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ವೇದಿಕೆಗೆ ಬರುವ ಭಯವನ್ನು ಬಿಟ್ಟು ಧೈರ್ಯವಾಗಿ ಮುಂದೆ ಬರುತ್ತಾರೆ ಎಂದರು.


ಯುವವಾಹಿನಿಯ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸದಸ್ಯರು ಪಾಲ್ಗೊಳ್ಳಲು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸುವ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮಂಗಳೂರು ಯುವವಾಹಿನಿ ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಸ್ವಾಗತಿಸಿದರು.

 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೊಲ್ಯ ಘಟಕದ ಅಧ್ಯಕ್ಷರಾದ ಜೀವನ್ ಕೊಲ್ಯ ಇವರನ್ನು ಮಂಗಳೂರು ಘಟಕದ ಪರವಾಗಿ ಮಾಜಿ ಅಧ್ಯಕ್ಷ ನವೀನ್ ಚಂದ್ರ ಪೂಜಾರಿ ಹೂ ನೀಡಿ ಸ್ವಾಗತಿಸಿದರು  ಜಯ್ ಕುಮಾರ್ ಕೊಲ್ಯ ಗೌರವಿಸಿದರು.

ಗುರು ಸಂದೇಶವನ್ನು ವ್ಯಕ್ತಿತ್ವ ವಿಕಸನ ನಿರ್ದೇಶಕ ಶ್ರೀಕಾಂತ್ ಅಂಚನ್ ಹೇಳಿದರು. ಕಾರ್ಯದರ್ಶಿ ಉಷಾ.ಕೆ ವರದಿ ವಾಚಿಸಿದರು, ಕೋಶಾಧಿಕಾರಿ ಚಂದ್ರಶೇಖರ್ ಕಿನ್ನಿಗೋಳಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article