ಸೆ. 18ರಂದು ಮೂಡುಬಿದಿರೆ ಪೇಟೆಯಲ್ಲಿ ವಾಹನ ಸಂಚಾರ ಬದಲಾವಣೆ

ಸೆ. 18ರಂದು ಮೂಡುಬಿದಿರೆ ಪೇಟೆಯಲ್ಲಿ ವಾಹನ ಸಂಚಾರ ಬದಲಾವಣೆ

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದ ಸಾವ೯ಜನಿಕ ಗಣೇಶೋತ್ಸವದ ಪ್ರಯುಕ್ತ ಮೂಡಬಿದ್ರೆ ಪೇಟೆಯಲ್ಲಿ ಸೆ. 18 ಶುಕ್ರವಾರದಂದು ಗಣೇಶ ದೇವರ ಮೂರ್ತಿಯ ಶೋಭಾಯಾತ್ರೆ ಮೆರವಣೆಗೆ ಇರುವುದರಿಂದ ಮಧ್ನಾಹ್ಯ 1.00 ಗಂಟೆಯಿಂದ ಮೂಡುಬಿದಿರೆ ಪೇಟೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. 

ಮಧ್ನಾಹ್ಯ 2-00ಗಂಟೆಯ ಬಳಿಕ ವಾಹನಗಳ ಸಂಚಾರದ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ಮಂಗಳೂರು ನಿಂದ ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಇನ್ನರ್ ವ್ಹೀಲ್ ಸಕ೯ಲ್, ರಿಂಗ್ ರೋಡ್ ,ಅಲಂಗಾರು ಮಾರ್ಗವಾಗಿ ಕಾರ್ಕಳ ಕಡೆಗೆ ಸಂಚರಿಸುವುದು.

ಮಂಗಳೂರಿನಿಂದ ಮೂಡುಬಿದಿರೆ ಬೆಳ್ತಂಗಡಿ, ಬಂಟ್ವಾಳ ಕಡೆಗಳಿಗೆ ಸಂಚರಿಸುವ ವಾಹನಗಳು ಮೂಡುಬಿದಿರೆಯ ಹೊರವರ್ತುಲ್ ರಸ್ತೆಯಾದ ವಿದ್ಯಾಗಿರಿ-ಮಾಸ್ತಿಕಟ್ಟೆ ಕ್ರಾಸ್ ರಸ್ತೆ,  ಮಾಸ್ತಿಕಟ್ಟೆ, ಪೇಪರ್ ಮಿಲ್ ಕ್ರಾಸ್ ರಸ್ತೆ , ಪೇಪರ್ ಮಿಲ್ಲ್ ಆಗಿ ಬಂಟ್ವಾಳ ಕಡೆಗೆ ಕೀರ್ತಿನಗರವಾಗಿ ಬೆಳ್ತಂಗಡಿ ಕಡೆಗೆ ಸಂಚರಿಸುವುದು. 

ಮೂಡುಬಿದಿರೆಯಿಂದ ಶಿರ್ತಾಡಿ ಕಡೆಗೆ ಸಂಚರಿಸುವವರು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಇನ್ನರ್ ವೀಲ್ ಸಕ೯ಲ್ ರಿಂಗ್ ರೋಡ್ ,ಅಲಂಗಾರು ಜೈನ್ ಪೇಟೆ ಮಾರ್ಗವಾಗಿ ಶಿರ್ತಾಡಿ ಕಡೆಗೆ ಸಂಚರಿಸುವುದು. 

ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಪೇಪರ್ ಮಿಲ್, ಮಾಸ್ತಿಕಟ್ಟೆ, ವಿದ್ಯಾಗಿರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.

ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಘು ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಸತ್ಯನಾರಾಯಣ ದೇವಸ್ಥಾನ, ಅಮರಶ್ರೀ ಟಾಕೀಸ್, ಮೂಡುಬಿದಿರೆ ಸರಕಾರಿ ಆಸ್ಪತ್ರೆ ಬಳಿ ಎಡಕ್ಕೆ ತಿರುಗಿ ಮಾಸ್ತಿಕಟ್ಟೆ, ವಿದ್ಯಾಗಿರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.

ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಮಂಗಳೂರು,ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಮಹಾವೀರ ಕಾಲೇಜು ಕೊಡಂಗಲ್ಲು ಕ್ರಾಸ್, ಕೋಟೆಬಾಗಿಲು, ಜೈನ್ ಪೇಟೆ ಅಲಂಗಾರ ಮಾರ್ಗವಾಗಿ ಸಂಚರಿಸುವುದು. 

ಗಣೇಶೋತ್ಸವ ಮೆರವಣಿಗೆ ಬರುವ ಸಾರ್ವಜನಿಕರು ತಮ್ಮ ವಾಹನವನ್ನು ಪೊಲೀಸ್ ಬಳಿ ಶಾಲಾ ಮೈದಾನ ,ಕೆಇಬಿ ಬಳಿ, ಕೈಕಂಬ ಜಂಕ್ಷನ್ ಬಳಿ ಇರುವ ಖಾಲಿ ಜಾಗ ಹಾಗೂ ಸ್ವರಾಜ್ಯ ಮೈದಾನ ಬಳಿ, ಕನ್ನಡ ಭವನದ ಬಳಿ ಮಾಸ್ತಿಕಟ್ಟೆ ಬಳಿ ,ಕೋಟ್೯ ರೋಡ್ ಬಳಿ ಪಾರ್ಕಿಂಗ್ ಮಾಡುವುದು.

ಮೂಡುಬಿದಿರೆ ಪೇಟೆ  ಬಸ್ ನಿಲ್ದಾಣ ಬಳಿ, ಸಮಾಜ ಮಂದಿರ ಬಳಿ, ಮಾಕೆ೯ಟ್ ಕಟ್ಟಡ ಬಳಿ, ಹನುಮಾನ ದೇವಸ್ಥಾನ ಬಳಿ, ಮಸೀದಿ ರಸ್ತೆಯಲ್ಲಿ ,ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ , ಪುರಸಭೆಯ ರಸ್ತೆಯಲ್ಲಿ ,ಪಟ್ಟಾಡಿ ರಸ್ತೆಯಲ್ಲಿ ಅಮರಶ್ರೀ ಟಾಕೀಸ್ ರಸ್ತೆಯಲ್ಲಿ ಜಿವಿ ಪೈ ಆಸ್ಪತ್ರೆ ಬಳಿ, ನಿಶ್ಮಿತಾ ಸರ್ಕಲ್ ಬಳಿ, ಐ.ಬಿ ರೋಡ್ ಬಳಿ ವಾಹನಗಳ ಪಾರ್ಕಿಂಗ್ ನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ, ಸಾರ್ವಜನಿಕರು ವಾಹನ ಸಂಚಾರದ ಸಮಯ ಪೊಲೀಸರೊಂದಿಗೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸುವಂತೆ ಮೂಡುಬಿದಿರೆ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article