ಪ್ರಧಾನಿ ನರೇಂದ್ರ ಮೋದಿ ಅವರ ಸಾವ೯ಜನಿಕ ಸೇವೆಗೆ 25ರ ಸಂಭ್ರಮ: ಸೆ. 17ರಿಂದ ಅ. 17ರವರೆಗೆ "ಆಶೀರ್ವಾದ ದೀಪ" ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ಅವರ ಸಾವ೯ಜನಿಕ ಸೇವೆಗೆ 25ರ ಸಂಭ್ರಮ: ಸೆ. 17ರಿಂದ ಅ. 17ರವರೆಗೆ "ಆಶೀರ್ವಾದ ದೀಪ" ಅಭಿಯಾನ


ಮೂಡುಬಿದಿರೆ: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ಸೆ. 17ರಿಂದ ಅ.17 ವರೆಗಿನ ಅಭಿಯಾನದಲ್ಲಿ "ಆಶೀರ್ವಾದ ದೀಪ" ಪ್ರತಿ ಬೂತಿನಲ್ಲಿ ಪ್ರತಿಯೊಂದು ಕುಟುಂಬವು ದೀಪ ಬೆಳಗಿಸುವ ಮೂಲಕ ಆಚರಿಸುವಂತೆ ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದ್ದಾರೆ.  

ಪ್ರಮುಖ 13 ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಈ ಪೈಕಿ ಪ್ರಥಮ ಕಾರ್ಯಕ್ರಮವಾಗಿ ದೀಪ ಬೆಳಗಿಸುವ ಕಾಯ೯ಕ್ರಮವನ್ನು ಎಲ್ಲಾ ಬೂತಿನಲ್ಲಿಯೂ ಯಶಸ್ವಿಗೊಳಿಸುವಂತೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ /ಕಾರ್ಯದರ್ಶಿ/ಪ್ರಭಾರಿ, ಶಕ್ತಿಕೇಂದ್ರ ಪ್ರಮುಖರು ಹಾಗೂ ಪಕ್ಷದ ಅನನ್ಯ ಜವಾಬ್ದಾರಿಯುತ ಪ್ರಮುಖರಲ್ಲಿ ಪುತ್ರನ್ ಅವರು ವಿನಂತಿಸಿದ್ದಾರೆ.

ವಿಶೇಷವಾಗಿ ಪ್ರತಿ ಬೂತಿನಲ್ಲಿಯೂ ಕನಿಷ್ಠ 100 ಮನೆಗಳಲ್ಲಿ ಈ ಕಾರ್ಯಕ್ರಮ ನಡೆಯುವಂತೆ ಪ್ರಮುಖರು ನೋಡಿಕೊಳ್ಳುವಂತೆ ವಿನಂತಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article