ಹೊಸಬೆಟ್ಟು ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಸಂಘದ ಅಧ್ಯಕ್ಷರಾದ ರಾಜೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಡ್ರಿಕ್ ಅಲ್ಮೇಡಾ ಅವರು ಲೆಕ್ಕಪತ್ರ ಮಂಡಿಸುತ್ತಾ ಮಾತನಾಡಿ ಸಂಘವು ಒಟ್ಟು 1626 ಎ ತರಗತಿ ಸದಸ್ಯರನ್ನು ಹೊಂದಿದ್ದು, 57.88 ಲಕ್ಷ ರೂ. ಶೇರು ಬಂಡವಾಳ ಹೊಂದಿದೆ.ಒಟ್ಟು ಠೇವಣಿ 13.80 ಕೋಟಿ ರೂ. ಹೊಂದಿದ್ದು, ಸದಸ್ಯರ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ 14.44 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ.ಸಂಘವು ಸದಸ್ಯರಿಗೆ ಶೇಕಡಾ 18% ಡಿವಿಡೆಂಡ್ (ಲಾಭಾಂಶ) ಘೋಷಿಸಿದೆ.ಪ್ರಸ್ತುತ ಸಾಲಿನಲ್ಲಿ ಸಂಘವು 61.12 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸನ್ಮಾನ: ಪಿಯುಸಿ (PUC) ಪರೀಕ್ಷೆಯಲ್ಲಿ 600 ಕ್ಕೆ 600 ಅಂಕ ಗಳಿಸಿದ ದಿಶ ಎಂಬ ವಿದ್ಯಾರ್ಥಿನಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ನಿರ್ದೇಶಕರುಗಳಾದ ಸಚಿೇಂದ್ರ, ರೀಟಾ ಕುಟಿನ್ಹಾ, ಲಿಯೋ ಪಾವ್ಲ್ ನೆಜರೆತ್, ಪೀಟರ್ ವಿಲ್ಫ್ರೆಡ್ ಮೆಂಡೋನ್ಸಾ, ಶಿವರಾಮ ಪೂಜಾರಿ, ಸಂಜೀವ ನಾಯ್ಕ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ವಲೇರಿಯನ್ ಕುಟಿನ್ಹಾ ಅವರು ಸ್ವಾಗತಿಸಿದರು. ನಿರ್ದೇಶಕರಾದ ಪದ್ಮಪ್ರಸಾದ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷ ಜಯರಾಮ ಸುವರ್ಣ ಧನ್ಯವಾದ ನೆರವೇರಿಸಿದರು.