ಪಣಪಿಲ ಕಂಬಳ: ಸಿದ್ಧತಾ ಸಭೆ
Monday, September 28, 2026
ಮೂಡುಬಿದಿರೆ: ಜಿಲ್ಲೆಯ ಮೊದಲ ಕಂಬಳ ನ. 7ರಂದು ಪಣಪಿಲದಲ್ಲಿ ನಡೆಯಲಿದ್ದು ಎಲ್ಲಾ ವಿಭಾಗಗಳಲ್ಲಿಯೂ ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೆ.ಪಣಪಿಲ ಅವರು ತಿಳಿಸಿದ್ದಾರೆ.
ಅವರು ಭಾನುವಾರ ಕಂಬಳ ಸಮಿತಿಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಕಂಬಳ ಕರೆಯ ಬಳಿ ನಡೆದ ಸಿದ್ದತಾ ಸಭೆಯಲ್ಲಿ ಮಾತನಾಡಿದರು.
ಕಂಬಳದ ಯಶಸ್ಸಿಗೆ ಯಾವ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಬೇಕೆನ್ನುವುದರ ಕುರಿತು ಚರ್ಚಿಸಲಾಯಿತು.
ಈವರೆಗೆ ನಡೆದ ಕಂಬಳಗಳಲ್ಲಿ ಗ್ರಾಮಸ್ಥರು ನೀಡಿರುವ ವಿಶೇಷ ಸಹಕಾರವನ್ನು ಸ್ಮರಿಸಿಕೊಂಡು ಈ ಬಾರಿಯೂ ಕಂಬಳದ ಯಶಸ್ಸಿಗೆ ಗ್ರಾಮಸ್ಥರ ಸಹಕಾರವನ್ನು ಯಾಚಿಸಲಾಯಿತು.
ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ,ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಚೌಟ,ಕಂಬಳದ ಮಹಾಪೋಷಕರಾದ ಹೇಮಾ ಕೆ.ಕೆ.ಪೂಜಾರಿ,ಮುನಿರಾಜ್ ಹೆಗ್ಡೆ,ದೇವರಾಜ್ ಸಾಲ್ಯಾನ್, ರಮಾನಾಥ ಸಾಲ್ಯಾನ್ ವಿ.ಎಸ್, ಮತ್ತಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
