ಪ್ರೇರಣಾ ಶಾಲೆ ಕಡಲಕೆರೆ, ಮೂಡಬಿದಿರೆಯಲ್ಲಿ "ನಮಾಮಿ ಭಾರತಂ" ಕಾರ್ಯಕ್ರಮ ಆಚರಣೆ

ಪ್ರೇರಣಾ ಶಾಲೆ ಕಡಲಕೆರೆ, ಮೂಡಬಿದಿರೆಯಲ್ಲಿ "ನಮಾಮಿ ಭಾರತಂ" ಕಾರ್ಯಕ್ರಮ ಆಚರಣೆ


ಮೂಡುಬಿದಿರೆ: ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಇವರ ವತಿಯಿಂದ " ನಮಾಮಿ ಭಾರತಂ " ವಂದೇ ಮಾತರಂ ಸಾಮೂಹಿಕ ಗೀತಾ ಪಠಣ ಕಾರ್ಯಕ್ರಮ ಪ್ರೇರಣಾ ಶಾಲೆ ಕಡಲಕೆರೆಯಲ್ಲಿ  ಜರುಗಿತು. 


ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಅನಂತ ಚತುರ್ದಶಿಯಂದು ಬೆಳಗ್ಗೆ 11 ಗಂಟೆಗೆ ಭಾರತದಾದ್ಯಂತ ಏಕಕಾಲದಲ್ಲಿ ಒಂದು ಕೋಟಿಗೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ಯೋಜನೆಯ ಅಂಗವಾಗಿ ‌ ಪ್ರೇರಣಾ ಶಾಲೆಯ ಎಲ್ಲಾ ಶಿಕ್ಷಕರು ಸಹಿತ  320 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 3.12 ನಿಮಿಷಗಳಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು.


ಪ್ರೇರಣಾ ಶಾಲೆಯ ಸಂಚಾಲಕರಾದ ಎಂ. ಶಾಂತರಾಮ ಕುಡ್ವ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, "ಬಂಕಿಮಚಂದ್ರ ಚಟರ್ಜಿಯವರು ಸಂಸ್ಕೃತ ಭಾಷೆಯಲ್ಲಿ ಬಂಗಾಳಿ ಲಿಪಿಯಲ್ಲಿ ರಚಿಸಿದ ವಂದೇ ಮಾತರಂ ಗೀತೆಯು ಬಂಗಾಳದ ಬಂಗದರ್ಶನ ಪತ್ರಿಕೆಯಲ್ಲಿ 07.11.1875 ರಂದು ಪ್ರಥಮವಾಗಿ ಪ್ರಕಟವಾಯಿತು. ನಂತರ 1882 ರಲ್ಲಿ ಚಟರ್ಜಿಯವರ ಆನಂದಮಠ ಕಾದಂಬರಿಯಲ್ಲಿ ಸೇರ್ಪಡೆಯಾಯಿತು. ವಂದೇ ಮಾತರಂ ಎಂದರೆ ಸಂಸ್ಕೃತದಲ್ಲಿ ಭಾರತ ಮಾತೆಗೆ ನಮಿಸು ಎಂಬ ಅರ್ಥ. ಈ ಗೀತೆಯು ಅಂದಿನ ಕಾಲದಲ್ಲಿ ಸ್ವಾತಂತ್ರ್ಯ ಯೋಧರಿಗೆ ಸ್ಫೂರ್ತಿ ನೀಡಿದ್ದಲ್ಲದೇ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಬ್ರಿಟಿಷರ ವಿರುದ್ಧದ ಸ್ವದೇಶಿ ಚಳುವಳಿಗೆ ಈ ಹಾಡು ಪ್ರೇರಕವಾಯಿತು.


ಕುದಿರಾಮ್ ಬೋಸ್, ಸುಭಾಷ್ ಚಂದ್ರ ಬೋಸ್, ಅಜಾದ್, ಭಗತ್ ಸಿಂಗ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರನ್ನು ಉತ್ತೇಜಿಸಿದ ಈ ಗೀತೆಯನ್ನು 1896 ರಲ್ಲಿ ರವೀಂದ್ರನಾಥ ಠಾಗೋರ್ ರವರು ತಾವೇ ರಾಗ ಸಂಯೋಜಿಸಿ ಹಾಡಿ ಹೊಸ ಕ್ರಾಂತಿಗೆ ಮುನ್ನಡಿ ಬರೆದರು. ಅರವಿಂದ್ ಘೋಷ್ ರವರು 1907 ರಲ್ಲಿ ವಂದೇ ಮಾತರಂ ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದರು. ಇದೀಗ ವಂದೇ ಮಾತರಂ ಗೆ ಭಾರತ ಸರಕಾರವು ರಾಷ್ಟ್ರಗೀತೆಯ ಸ್ಥಾನಮಾನ ನೀಡಿರುವುದು ಉತ್ತಮ ಆಶಯ" ಎಂದು ನುಡಿದರು.

ಶಾಲಾ ಮುಖ್ಯ ಮಾತಾಜಿ ವತ್ಸಲಾ ರಾಜೇಶ್ ಸ್ವಾಗತಿಸಿ, ವಂದಿಸಿದರು. ಶಾಲಾ ಶಿಕ್ಷಕ ಸುರೇಂದ್ರ, ಶಿಕ್ಷಕಿಯರಾದ ಹರ್ಷಿತಾ, ಗ್ರೀಷ್ಮಾ ಹಾಗೂ ಮಯೂರಿ ಅವರು ವಂದೇ ಮಾತರಂ ಗೀತೆಯನ್ನು ಚಿತ್ರೀಕರಿಸಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಲು  ಸಹಕರಿನುಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article