ಕಾಪು ತಾಲೂಕು ಖೋ ಖೋ ಪಂದ್ಯಾವಳಿಯ ಉದ್ಘಾಟನೆ
ಕಾಪು ತಾಲೂಕು ಕ್ರೀಡಾ ಸಂಯೋಜಕ ಸುಜಿತ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವಾಸ್ ಕಾಮತ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಯುನೈಟೆಡ್ ಜನರಲ್ ಇನ್ಸೂರೆನ್ಸ್ ಎಂಪ್ಲಾಯೀಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಪ್ರಭಾರ ಕಾರ್ಯದರ್ಶಿ ಪ್ರಭಾಕರ್ ಕೆ.ಎಸ್. ಮಾತನಾಡಿ, ಶಿಸ್ತು, ಕ್ರೀಡಾ ಸ್ಪೂರ್ತಿಯೊಂದಿಗೆ ನಮ್ಮ ಈ ಪಂದ್ಯಾವಳಿಯನ್ನು ಯಶಸ್ವಿ ನಡೆಗೆ ಸಾಗಿಸಿ ಎಂದು ಕ್ರೀಡಾಪಟುಗಳಿಗೆ ಕರೆಯಿತ್ತರು.
ಪ್ರತಿಮಾ ಆಚಾರ್ಯ ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಲೀನಾ ಎಸ್. ನಾಯ್ಕ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ರಚನಾ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಥಮ ಸ್ಥಾನಿ ಅದಮಾರು ಪಿಪಿಸಿ ಪ.ಪೂ. ಕಾಲೇಜು, ಮತ್ತು ದ್ವಿತೀಯ ಸ್ಥಾನಿ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ತಂಡವನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ನಿರಂಜನ್ ಬೆಳ್ಳೆ ಮೂಡುಬೆಳ್ಳೆ, ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ್ ಕೆ.ಎಸ್., ಕಾಪು ತಾಲೂಕು ಕ್ರೀಡಾ ಸಂಯೋಜಕ ಸುಚಿತ್ ಶೆಟ್ಟಿ, ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ವಿಶ್ವಾಸ್ ಕಾಮತ್, ಕಾಲೇಜಿನ ಪ್ರಾಂಶುಪಾಲೆ ಡಾ. ಲೀನಾ ಎಸ್. ನಾಯ್ಕ ಇದ್ದರು.
ತೀರ್ಪುಗಾರರಾಗಿ ಪ್ರದೀಪ್ ಎಸ್., ವಿನಯ್, ಕಿರಣ್, ಮಿಥುನ್, ಕಾರ್ತಿಕ್, ಸುಜಿತ್ ಶೆಟ್ಟಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸುದರ್ಶನ್, ಶರತ್‌ರಾಜ್ ಇವರನ್ನು ಗೌರವಿಸಲಾಯಿತು. ಉಪನ್ಯಾಸಕಿ ಸುಶ್ಮಿತಾ ವಂದಿಸಿದರು. ಉಪನ್ಯಾಸಕಿ ದಿವ್ಯಾ ನಿರೂಪಿಸಿದರು.