ಕಟೀಲಿನಲ್ಲಿ ನವರಾತ್ರಿ ಉತ್ಸವಾಂಗ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಕಟೀಲಿನಲ್ಲಿ ನವರಾತ್ರಿ ಉತ್ಸವಾಂಗ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ


ಕಟೀಲು: ಕಲಾಮಾತೆ ಕಟೀಲು ದುರ್ಗೆಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಕಲಾವಿದರ ಸಂಖ್ಯೆ ಹೆಚ್ಚುತ್ತಿರುವುದು ಸಂತಸ. ನಮ್ಮ ಸಂಸ್ಕೃತಿಯಲ್ಲಿ ಯುವ ಸಮುದಾಯ ಹೆಚ್ಚು ತೊಡಗಿಸಿಕೊಳ್ಳುತ್ತಿರುವುದು ಇದರಿಂದ ಗೊತ್ತಾಗುತ್ತದೆ ಎಂದು ಉದ್ಯಮಿ ರಾಮಪ್ರಕಾಶ ಹೊಳ್ಳ ಹೇಳಿದರು.


ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ನವರಾತ್ರಿಯಲ್ಲಿ ಸರಸ್ವತಿ ಸದನ ಹಾಗೂ ಕಲಾಮಂಟಪ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ, ಕಟೀಲು ದುರ್ಗೆ ಕಲಾಪ್ರಿಯೆ. ಪ್ರತಿ ಭಾನುವಾರ ಶುಕ್ರವಾರ ದೇಗುಲದಲ್ಲಿ ನೃತ್ಯ ಸಂಗೀತಗಳಿಗೆ ಅವಕಾಶ ನೀಡಲಾಗಿದ್ದು ಇಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನವರಾತ್ರಿ ದಿನಗಳಲ್ಲೂ ಒಂದು ವೇದಿಕೆ ಸಾಕಾಗದೆ ಎರಡನೇ ವೇದಿಕೆಯಲ್ಲೂ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದರು.

ನಿವೃತ್ತ ಶಿಕ್ಷಕ ಕೇಶವ ಹೊಳ್ಳ, ಕೆ.ಎನ್. ಪರಮೇಶ್ವರಯ್ಯ, ಸಾಯಿನಾರಾಯಣ ಕಲ್ಮಡ್ಕ, ಜ್ಯೋತಿ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಸಂಗೀತ, ಭರತನಾಟ್ಯ, ತಾಳಮದ್ದಲೆ, ಯಕ್ಷಗಾನ ಕಾರ್ಯಕ್ರಮಗಳು ನಡೆದವು. ನವರಾತ್ರಿಯ ಮೊದಲ ದಿನ ಬೆಳಗ್ಗೆ ಪುನರೂರು, ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಪಾದಯಾತ್ರೆಯಲ್ಲಿ ಕಟೀಲಿಗೆ ಆಗಮಿಸಿದ್ದರು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ದೇಗುಲಕ್ಕೆ ಭೇಟಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article